Bangalore, ಡಿಸೆಂಬರ್ 30 -- ಬೆಂಗಳೂರು: ಪ್ಯಾನ್‌ ಇಂಡಿಯಾ ಸಿನಿಮಾವಲ್ಲದೆ, ವಿಶೇಷವಾಗಿ ಕನ್ನಡ ಸಿನಿಮಾ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ತೆರೆಕಂಡ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಮೊದಲ ದಿನದ ಬಾಕ್ಸ್‌ ಆಫೀಸ್‌ ವರದಿ ಹೊರಬಿದ್ದಿದೆ. ಸಚ್‌ನಿಲ್ಕ್‌.ಕಾಂ ವರದಿ ಪ್ರಕಾರ ದರ್ಶನ್‌ ಸಿನಿಮಾ ಮೊದಲ ದಿನ ಅಂದಾಜು 9 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಗಳಿಕೆಯಲ್ಲಿ ಬಹುತೇಕ ಆದಾಯವು ಕರ್ನಾಟಕದಲ್ಲಿಯೇ ಬಂದಿರುತ್ತದೆ. ಅಂದಹಾಗೆ, ಮುಂಗಡ ಟಿಕೆಟ್‌ ಬುಕ್ಕಿಂಗ್‌ ಆಧರಿಸಿ ಈ ಆರಂಭಿಕ ಬಾಕ್ಸ್‌ ಆಫೀಸ್‌ ವರದಿ ರಚಿಸಲಾಗಿದ್ದು, ನಿಜವಾದ ಮೊತ್ತ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಸಿಂಗಲ್‌ ಸ್ಕ್ರೀನ್‌ ಪರದೆಗಳಲ್ಲಿ, ಮಲ್ಟಿ ಪ್ಲೆಕ್ಸ್‌ ಅಲ್ಲದ ಆನ್‌ಲೈನ್‌ ಬುಕ್ಕಿಂಗ್‌ ಇಲ್ಲದ ಸಾಮಾನ್ಯ ಚಿತ್ರಮಂದಿರಗಳಲ್ಲಿಯೂ ಕಾಟೇರ ಬಿಡುಗಡೆಯಾಗಿರುತ್ತದೆ. ಹೀಗಾಗಿ, ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ. ಒಟ್ಟಾರೆ ದಚ್ಚು ಅಭಿಮಾನಿಗಳು ಮೊದಲ ದಿನದ ಶೋಗೆ ಮುಗಿಬಿದ್ದಿದ್ದು, ಹಲ...