Bangalore, ಡಿಸೆಂಬರ್ 30 -- ಬೆಂಗಳೂರು: ಪ್ಯಾನ್‌ ಇಂಡಿಯಾ ಸಿನಿಮಾವಲ್ಲದೆ, ವಿಶೇಷವಾಗಿ ಕನ್ನಡ ಸಿನಿಮಾ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ತೆರೆಕಂಡ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಮೊದಲ ದಿನದ ಬಾಕ್ಸ್‌ ಆಫೀಸ್‌ ವರದಿ ಹೊರಬಿದ್ದಿದೆ. ಸಚ್‌ನಿಲ್ಕ್‌.ಕಾಂ ವರದಿ ಪ್ರಕಾರ ದರ್ಶನ್‌ ಸಿನಿಮಾ ಮೊದಲ ದಿನ ಅಂದಾಜು 9 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ, ಚಿತ್ರತಂಡ ಈಗ ಅಧಿಕೃತ ಹೇಳಿಕೆ ನೀಡಿದ್ದು, ಗಳಿಕೆ 19 ಕೋಟಿ ರೂ. ದಾಟಿದೆ.

ಇದೀಗ ಕಾಟೇರ ಚಿತ್ರ ತಂಡದಿಂದ ಅಧಿಕೃತವಾಗಿ ಬಾಕ್ಸ್‌ ಆಫೀಸ್‌ ವರದಿ ಬಂದಿದ್ದು, ಮೊದಲ ದಿನ 19 ಕೋಟಿ 79 ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು ತಿಳಿಸಿದೆ.

ಕರ್ನಾಟಕದಲ್ಲಿ ಸಿಂಗಲ್‌ ಸ್ಕ್ರೀನ್‌ ಪರದೆಗಳಲ್ಲಿ, ಮಲ್ಟಿ ಪ್ಲೆಕ್ಸ್‌ ಅಲ್ಲದ ಆನ್‌ಲೈನ್‌ ಬುಕ್ಕಿಂಗ್‌ ಇಲ್ಲದ ಸಾಮಾನ್ಯ ಚಿತ್ರಮಂದಿರಗಳಲ್ಲಿಯೂ ಕಾಟೇರ ಬಿಡುಗಡೆಯಾಗಿರುತ್ತದೆ. ಹೀಗಾಗಿ, ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ. ಒಟ್ಟಾರೆ ದಚ್ಚು ಅಭಿಮಾನಿಗಳು ಮೊದಲ ದಿನದ ಶೋಗೆ ಮುಗಿ...