Bengaluru, ಫೆಬ್ರವರಿ 15 -- Just Married Song: ಶೈನ್‌ ಶೆಟ್ಟಿ ಮತ್ತು ಅಂಕಿತಾ ಅಮರ್‌ ನಟಿಸಿದ ಜಸ್ಟ್‌ ಮ್ಯಾರೀಡ್‌ ಸಿನಿಮಾದ ಮೊದಲ ಹಾಡು ಪ್ರೇಮಿಗಳ ದಿನದ ಪ್ರಯುಕ್ತ ಬಿಡುಗಡೆ ಆಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮೊದಲ ಹಾಡನ್ನು ರಿಲೀಸ್‌ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಕೆ.ಕಲ್ಯಾಣ್ ಬರೆದಿರುವ "ಇದು ಮೊದಲನೇ ಸ್ವಾಗತಾನಾ.." ಎಂಬ ಹಾಡು ಇದಾಗಿದ್ದು, ಕೇಳುಗರಿಗೆ ಗುಂಗು ಹಿಡಿಸಿದೆ.

ಕಾಂತಾರ ಸೇರಿದಂತೆ ಸಾಲು ಸಾಲು ಹಿಟ್‌ ಚಿತ್ರಗಳಿಗೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್, abbs studios ಬ್ಯಾನರ್‌ನಲ್ಲಿ ಸಿ.ಆರ್ ಬಾಬಿ ಅವರ ಜೊತೆಗೂಡಿ ನಿರ್ಮಿಸಿರುವ ಸಿನಿಮಾ ಈ ಜಸ್ಟ್‌ ಮ್ಯಾರೀಡ್‌. ನಿರ್ಮಾಣದ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ ನಿರ್ದೇಶಕಿ ಸಿ.ಆರ್. ಬಾಬಿ.

ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಈ ರೊಮ್ಯಾಂಟಿಕ್‌ ಡ್ಯುಯೆಟ್‌ ಹಾಡನ್ನು ಬಿಡುಗಡೆ ಮಾಡಿದ್ದಾರೆ. "ಇದು ಮೊದಲನೇ ಸ್ವಾಗತನಾ.." ಹಾಡು ತುಂಬಾ ಚೆನ್ನಾಗಿದೆ. ಬಾಬಿ ಅವರ ನಿರ್ದೇಶನದಲ್ಲಿ ಹಾಗೂ ಅಜನೀಶ್ ಲೋಕನ...