ಭಾರತ, ಮಾರ್ಚ್ 23 -- Jawahar Navodaya Vidyalaya Result Class 6: ಜವಾಹರ್ ನವೋದಯ ವಿದ್ಯಾಲಯ (ಜೆಎನ್‌ವಿ) 6ನೇ ತರಗತಿ ಆಯ್ಕೆ ಪರೀಕ್ಷೆಯ ಫಲಿತಾಂಶವು ಶೀಘ್ರದಲ್ಲೇ ಪ್ರಕಟವಾಗಲಿದೆ. 6ನೇ ತರಗತಿಯ ಜೆಎನ್‌ವಿಎಸ್‌ಟಿ (ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ) ಗೆ ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್- navodaya.gov.in ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು ಮತ್ತು ಮೆರಿಟ್ ಪಟ್ಟಿಯ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೆಎನ್‌ವಿಎಸ್‌ಟಿ 6ನೇ ತರಗತಿ ಫಲಿತಾಂಶದ ಜೊತೆಗೆ, 9ನೇ ತರಗತಿ ಫಲಿತಾಂಶ ಕೂಡ ಪ್ರಕಟವಾಗಲಿದೆ.

ಇನ್ನೇನು ಕೆಲ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ನಂತರ navodaya.gov.in ಜೆಎನ್‌ವಿಎಸ್‌ಟಿ 6, 9ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಬಹುದು. ಈ ವೆಬ್‌ಸೈಟ್‌ಗೆ ಹೋಗಿ ಜೆಎನ್‌ವಿಎಸ್‌ಟಿ 6ನೇ, 9ನೇ ಮೆರಿಟ್ ಪಟ್ಟಿ 2025 ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಜೆಎನ್‌ವಿಎಸ್‌ಟಿ 6ನೇ, 9ನೇ ಮೆರಿಟ್ ಪಟ್ಟಿ 2025 PDF ಡೌನ್‌ಲೋಡ್ ಆಯ್ಕೆಯು ಪರದೆಯ ಮೇಲೆ ಕಾಣಿಸಿಕೊಳ್ಳ...