ಭಾರತ, ಮಾರ್ಚ್ 20 -- Kanneda Web Series: 1990ರ ದಶಕದ ಘಟನೆ ಇದಾಗಿದೆ. ಪಂಜಾಬಿ ಗಾಯಕನೊಬ್ಬ ರೋಡ್‌ ಸೈಡ್‌ ಹಾಡುತ್ತ ಜನಪ್ರಿಯತೆ ಪಡೆಯುತ್ತಾನೆ. ಮುಂದೆ ಆತ ಉದಯೋನ್ಮುಖ ಗಾಯಕನಾಗುತ್ತಾನೆ. ಈ ಸಮಯದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಲಸಿಗನ ಕಷ್ಟ, ಸಮಸ್ಯೆಗಳು ಬೆನ್ನು ಹತ್ತುತ್ತವೆ. ಈ ಸಮಯದಲ್ಲಿ ಈತ ಉಗ್ರ ಹಾದಿಯನ್ನೂ ಹಿಡಿಯಬೇಕಾಗುತ್ತದೆ. ಕನ್ನೆಡಾ ಎಂಬ ರೋಚಕ ವೆಬ್‌ಸರಣಿ ಮಾರ್ಚ್‌ 21 ರಿಂದ ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

ಈ ವಾರ ಭಾರತದ ಒಟಿಟಿಗಳಲ್ಲಿ ವಿವಿಧ ಸಿನಿಮಾಗಳು ಬಿಡುಗಡೆಯಾಗಲು ಸರತಿಯಲ್ಲಿವೆ. ಜಿಯೋಹಾಟ್‌ಸ್ಟಾರ್‌ ಸಾಕಷ್ಟು ಹೊಸ ಸಿನಿಮಾ, ವೆಬ್‌ ಸರಣಿಗಳನ್ನು ಪರಿಚಯಿಸುತ್ತಿದೆ. ಇದರ ಮೊದಲ ಜಾಗತಿಕ ಕಾರ್ಯಕ್ರಮವಾದ ಡೇರ್‌ಡೆವಿಲ್: ಬಾರ್ನ್ ಎಗೇನ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೀಗ ಜಿಯೋಹಾಟ್‌ಸ್ಟಾರ್‌ ತನ್ನ ಮೊದಲ ಹಿಂದಿ ಭಾಷೆಯ ವೆಬ್‌ಸರಣಿ ಪರಿಚಯಿಸುತ್ತಿದೆ. ಅದರ ಹೆಸರು ಕನ್ನೇಡ . ಇದು ಅಪರಾಧ ಜಗತ್ತಿನ ಸಿನಿಮಾ. ಬದುಕುವ ಹೋರಾಟವೂ ಹೌ...