ಭಾರತ, ಫೆಬ್ರವರಿ 14 -- JioHotstar OTT launched: ಇನ್ಮುಂದೆ ಜಿಯೋಸಿನಿಮಾ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಗಳು ಪ್ರತ್ಯೇಕವಾಗಿ ದೊರಕದು. ಏಕೆಂದರೆ, ಇವೆರಡು ವಿಲೀನವಾಗಿದೆ. ಇನ್ಮುಂದೆ ಇವೆರಡು ಪ್ಲಾಟ್‌ಫಾರ್ಮ್‌ಗಳು ಜಿಯೊಹಾಟ್‌ಸ್ಟಾರ್‌ ಆಗಿ ಒಟಿಟಿ ವೀಕ್ಷಕರಿಗೆ ಲಭ್ಯವಿರಲಿದೆ. ವಯಾಕಾಂ18 ಮತ್ತು ಸ್ಟಾರ್ ಇಂಡಿಯಾ ವಿಲೀನದ ಜಂಟಿ ಸಹಯೋಗದಿಂದ ರೂಪುಗೊಂಡ ಜಿಯೊಸ್ಟಾರ್ ಇದೀಗ ಜಿಯೊಹಾಟ್‌ಸ್ಟಾರ್‌ ಆಗಿ ಲಾಂಚ್‌ ಆಗಿದೆ. ಜಿಯೊಸಿನಿಮಾ ಮತ್ತು ಡಿಸ್ನೀ+ಹಾಟ್ ಸ್ಟಾರ್ ಒಟ್ಟಾಗಿರುವುದರಿಂದ ಒಟಿಟಿ ಪ್ರಿಯರಿಗೆ ಮನರಂಜನೆ ಮತ್ತು ಕ್ರೀಡಾ ಕಂಟೆಂಟ್‌ಗಳು ಜಿಯೊಹಾಟ್‌ಸ್ಟಾರ್‌ನಲ್ಲಿ ದೊರಕಲಿದೆ.

"ಜಿಯೊಹಾಟ್‌ಸ್ಟಾರ್‌ ಮೂಲಕ ಭಾರತೀಯರಿಗೆ ಪ್ರೀಮಿಯಂ ಮನರಂಜನೆ ನೀಡುವ ಧ್ಯೇಯೋದ್ದೇಶವನ್ನು ಕಂಪನಿ ಹೊಂದಿದೆ. ಎಐ ಆಧರಿತ ಸಜೆಷನ್‌ಗಳು, 19ಕ್ಕೂ ಹೆಚ್ಚು ಭಾಷೆಗಳಲ್ಲಿ ಸ್ಟ್ರೀಮಿಂಗ್ ಒದಗಿಸುವಿಕೆ ಇತ್ಯಾದಿಗಳೊಂದಿಗೆ ನಾವು ಕಂಟೆಂಟ್‌ ಅನ್ನು ಇನ್ನಷ್ಟು ವೈಯಕ್ತಿಕಗೊಳಿಸುತ್ತಿದ್ದೇವೆ" ಎಂದು ಜಿಯೊಸ್ಟಾರ್ ಸಿಇಒ ಕಿರಣ್ ಮಣಿ...