ಭಾರತ, ಮಾರ್ಚ್ 26 -- Mufasa: The Lion King OTT Release: 'ಮುಫಾಸಾ: ದಿ ಲಯನ್ ಕಿಂಗ್' ಸಿನಿಮಾ ಜಗತ್ತಿನಾದ್ಯಂತ ಸೂಪರ್‌ಹಿಟ್‌ ಆಗಿತ್ತು. ಕಾಡಿನಲ್ಲಿ ಸಿಂಹಗಳು ಮತ್ತು ಇತರ ಪ್ರಾಣಿಗಳನ್ನು ಒಳಗೊಂಡ ಈ ಹಾಲಿವುಡ್ ಚಿತ್ರವು ಬ್ಲಾಕ್ಬಸ್ಟರ್ ಆಗಿತ್ತು. ಈ ಚಿತ್ರ ಕಳೆದ ವರ್ಷ ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆರು ವರ್ಷಗಳ ಹಿಂದೆ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ದಿ ಲಯನ್ ಕಿಂಗ್ ಚಿತ್ರದ ಫ್ರೀಕ್ವೆಲ್‌ ಇದಾಗಿದೆ. ಇಂದು ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎನ್ನುವುದು ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಆದರೆ, ಇದು ಭಾರತದ ಹಲವು ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆದರೂ ಕನ್ನಡದಲ್ಲಿ ಸ್ಟ್ರೀಮಿಂಗ್‌ ಆಗದು ಎನ್ನುವುದು ಕನ್ನಡಿಗರಿಗೆ ಬೇಸರದ ಸಂಗತಿ.

ಮುಫಾಸಾ: ದಿ ಲಯನ್ ಕಿಂಗ್ ಇಂದು (ಮಾರ್ಚ್ 26) ಜಿಯೋಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇಂದು ಮಧ್ಯಾಹ್ನ 12.30 ಕ್ಕೆ ಸ್ಟ್ರೀಮಿಂಗ್ ಆರಂಭವಾಗಲಿದೆ. ಬಾಡಿಗೆ ಇಲ್ಲದೆ ನಿಯಮಿತ ಸ್ಟ್ರೀಮಿಂಗ್‌ಗೆ ಪ್ರವೇಶಿಸಲಿದೆ. ಇದು ಇಂ...