ಭಾರತ, ಮೇ 11 -- JioCinema: ಇತ್ತೀಚೆಗೆ ಪರಿಚಯಿಸಲಾಗಿದ್ದ JioCinema Premium, ಯಶಸ್ವಿಯಾಗಿ ಜನರನ್ನು ಆಕರ್ಷಿಸುತ್ತಿರುವಾಗಲೇ, ಆ ಪ್ಲಾಟ್‌ಫಾರಂನಲ್ಲಿ ಹೊಸ ಹೊಸ ಮನರಂಜನಾ ವೈಶಿಷ್ಟ್ಯಗಳನ್ನು ತನ್ನ ಚಂದಾದಾರರಿಗೆ ನೀಡಲಾಗುತ್ತಿದೆ. ಇಂಥದ್ದೇ ಒಂದು ಹೊಸ ತಾಣವನ್ನು ಜಿಯೋಸಿನಿಮಾ ವೇದಿಕೆಯಲ್ಲಿ ರೂಪಿಸಲಾಗಿದ್ದು, ಜಗತ್ತಿನ ಹಲವು ಜನಪ್ರಿಯ ಮತ್ತು ಅತ್ಯದ್ಭುತ ಆನಿಮೇ ಷೋಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

ಮೇ 12ರಿಂದ ಜಿಯೋಸಿನಿಮಾದಲ್ಲಿ ಆನಿಮೇ ಷೋಗಳಿಗಾಗಿಯೇ ಒಂದು ಪ್ರತ್ಯೇಕ ಹಬ್ ಒಂದನ್ನು ಪರಿಚಯಿಸಲಾಗುತ್ತಿದೆ. ಆನಿಮೇ ಪ್ರಿಯರಿಗೆ ಇದೊಂದು ಅದ್ಭುತ ತಾಣವಾಗುವುದರಲ್ಲಿ ಸಂಶಯವೇ ಇಲ್ಲ. ಜಾಗತಿಕವಾಗಿ ಸೂಪರ್ ಹಿಟ್ ಆಗಿರುವ ಆನಿಮೇ 'ಡೆಮನ್ ಸ್ಲೇಯರ್'ನ ನಾಲ್ಕನೇ ಸೀಸನ್‌ನೊಂದಿಗೆ ಈ ಆನಿಮೇ ಹಬ್ಬ ಪ್ರಾರಂಭವಾಗಲಿದೆ. ಬಹುನಿರೀಕ್ಷಿತ 'ಡೆಮನ್ ಸ್ಲೇಯರ್' ಅನ್ನು ನೀವು ಮೇ 12ರಿಂದ ಜಿಯೋಸಿನಿಮಾದಲ್ಲಿ ವೀಕ್ಷಿಸಬಹುದಾಗಿದೆ. ಜಿಯೋಸಿನಿಮಾ ಪ್ರೀಮಿಯಮ್‌ನಲ್ಲಿ ಆನಿಮೇ ಹಬ್‌ ಅನ್ನು ಅನಿಯಮಿತವಾಗಿ ವೀಕ್ಷಿಸಬಹುದಾಗಿದ್ದು, ತಿ...