Bengaluru, ಜನವರಿ 29 -- ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಕ್ರಾಂತಿಯ ಪರಿಣಾಮ ಇಂದು ಬಹುತೇಕ ಎಲ್ಲ ವರ್ಗದ ಜನರಲ್ಲಿ ನಾವು ಸ್ಮಾರ್ಟ್‌ಫೋನ್ ಕಾಣುತ್ತೇವೆ. ಅದರಲ್ಲೂ ಕಡಿಮೆ ದರಕ್ಕೆ ಮೊದಲು ಇಂಟರ್ನೆಟ್ ಸೇವೆ ಒದಗಿಸಿದ ಜಿಯೋ ಕಂಪನಿಯ ಸಿಮ್‌ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಫೋನ್ ಕಳೆದುಹೋಗುವಾಗ, ಅದರಲ್ಲಿನ ಸಿಮ್ ಕೂಡ ಕಳವಾಗುತ್ತದೆ. ಸಿಮ್ ಕಳೆದುಹೋದರೆ ಅದರಿಂದ ಉಂಟಾಗುವ ತೊಂದರೆಗಳು ಒಂದೆರಡಲ್ಲ. ಫೋನ್‌ನಲ್ಲಿರುವ ಸಿಮ್‌ನ ನಂಬರ್‌ಗೆ ಬ್ಯಾಂಕಿಂಗ್, ಯುಪಿಐ ಎಂದು ಎಲ್ಲವೂ ಲಿಂಕ್ ಆಗಿರುವಾಗ, ನಂಬರ್ ದುರುಪಯೋಗವಾದರೆ ಎಂದು ಆತಂಕವಾಗುವುದು ಸಹಜ. ಅಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕು ಮತ್ತು ಸಿಮ್ ಬ್ಲಾಕ್ ಮಾಡಿಸುವುದು ಹೇಗೆ ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ: ಎಐ ಆ್ಯಪ್ ಅಭಿವೃದ್ಧಿಪಡಿಸಲು ಬಯಸುವಿರಾ? ಜಗತ್ತಿನ ಈ ಅಗ್ರ 10 ವೆಬ್‌ತಾಣಗಳಿಗೆ ಭೇಟಿ ನೀಡಿ

ಜಿಯೋ ಸಿಮ್ ಇರುವ ಫೋನ್ ಕಳೆದುಹೋದಾಗ, ಸಿಮ್ ಬ್ಲಾಕ್ ಮಾಡಿಸುವುದು ಅಗತ್ಯ. ಅದಕ್ಕಾಗಿ, ವಿವಿಧ ಆಯ್ಕೆಗಳಿವೆ, ಅದರಲ್ಲಿ care@jio.com ಇಮೇ...