ಭಾರತ, ಮೇ 8 -- Jio Cinema OTT: ಒಟಿಟಿ ಡಿಜಿಟಲ್‌ ಕ್ಷೇತ್ರದಲ್ಲಿ ಹೊಸ ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಿರುವ ಜಿಯೋ ಸಿನಿಮಾ ಇದೀಗ, ತನ್ನ ವೀಕ್ಷಕ ಬಳಗಕ್ಕೆ ಬಂಪರ್‌ ಆಫರ್‌ ಘೋಷಿಸಿದೆ. ಜಿಯೋ ಸಿನಿಮಾದಲ್ಲಿ ಕಲರ್ಸ್‌ ಕನ್ನಡದ ಧಾರಾವಾಹಿಗಳನ್ನು ಮುಂಚಿತವಾಗಿಯೇ ನೋಡುವ ಅವಕಾಶ ನೀಡಿದೆ. ಭಾರತದ ಹೊಸ ಮನರಂಜನೆಯ ಪ್ಲಾನ್ ಅನ್ನು ಘೋಷಿಸಿರುವ ಜಿಯೋ ಸಿನಿಮಾ, ಒಟಿಟಿಯಲ್ಲಿನ ಒಂದಷ್ಟು ಕಂಟೆಂಟ್‌ಗಳನ್ನು ಟಿವಿಯಲ್ಲಿ ಪ್ರಸಾರ ಕಾಣುವುದಕ್ಕೂ ಮುನ್ನ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಿದೆ.

ಭಾರತದ ಮುಂಚೂಣಿಯ ಸ್ಟ್ರೀಮಿಂಗ್ ಪ್ಲಾಟ್ ಫಾರಂ ಜಿಯೊಸಿನಿಮಾ ಇತ್ತೀಚೆಗೆ ತನ್ನ ಜಾಹೀರಾತು ಮುಕ್ತ ಪ್ಲಾನ್ ಜಿಯೋ ಸಿನಿಮಾ ಪ್ರೀಮಿಯಂ ಅನ್ನು ಪ್ರಾರಂಭಿಕ ಬೆಲೆಗೆ ಘೋಷಣೆ ಮಾಡಿದೆ. ತಿಂಗಳಿಗೆ ಕೇವಲ 29 ರೂಪಾಯಿಗೆ ಒಂದು ಡಿವೈಸ್‌ಗೆ ಮತ್ತು ಏಕಕಾಲಕ್ಕೆ ನಾಲ್ಕು ಡಿವೈಸ್‌ಗಳಿಗೆ ತಿಂಗಳಿಗೆ 89 ರೂಪಾಯಿಂತೆ ಪ್ರಕಟಿಸಿದೆ.

ಇದನ್ನೂ ಓದಿ: OTT News: ತಿಂಗಳಿಗೆ 29 ರೂಗೆ ಪ್ರೀಮಿಯಂ ಪ್ಲಾನ್‌ ಪರಿಚಯಿಸಿದ ಜಿಯೋಸಿನಿಮಾ; ಒಟಿಟಿಯಲ್ಲಿ ಆರಂಭವಾಗ...