Bangalore, ಫೆಬ್ರವರಿ 13 -- JEE MainS Result 2025: ವಿವಿಧ ವೃತ್ತಿಪರ ಶಿಕ್ಷಣಗಳ ಪ್ರವೇಶಕ್ಕಾಗಿ ನಡೆಸಲಾಗುವ 2025ನೇ ಸಾಲಿನ ಜಂಟಿ ಪ್ರವೇಶ ( ಜೆಇಇ) ಮುಖ್ಯ ಪರೀಕ್ಷೆಯ ಮೊದಲ ಅವಧಿಯ ಪ್ರಥಮ ಪತ್ರಿಕೆಯ ಫಲಿತಾಂಶ ಪ್ರಕಟಿಸಲಾಗಿದ್ದು, ಕರ್ನಾಟಕದಿಂದ ಏಕೈಕ ವಿದ್ಯಾರ್ಥಿ ಇದರಲ್ಲಿ ಶೇ.100 ರಷ್ಟು ಪರ್ಸಂಟೈಲ್‌ ಅಂಕ ಪಡೆದುಕೊಂಡಿದ್ದಾನೆ. ಬೆಂಗಳೂರಿನ ಕುಶಾಗ್ರ ಗುಪ್ತಾ ಈ ಸಾಧನೆ ಮಾಡಿದ ವಿದ್ಯಾರ್ಥಿ. ಪತ್ರಿಕೆ 1 ರ ಅವಧಿ 1. ಹದಿನಾಲ್ಕು ವಿದ್ಯಾರ್ಥಿಗಳು ಭಾರತದಲ್ಲಿ ಶೇ 100 ಅಂಕ ಗಳಿಸಿದ್ದಾರೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಶೇ 100ರ ಗುರಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಇದ್ದಾರೆ. ರಾಜಸ್ಥಾನ ಒಂದರಲ್ಲಿಯೇ ಇಷ್ಟು ಅಂಕ ಪಡೆದ ಐವರು ವಿದ್ಯಾರ್ಥಿಗಳಿದ್ದಾರೆ. ಆದರೆ ಕುಶಾಲ್‌ ಗುಪ್ತ ಕರ್ನಾಟಕದಲ್ಲಿ 100 ಪರ್ಸೆಂಟೈಲ್ ಅಂಕಗಳನ್ನು ಪಡೆದುಕೊಂಡಿರುವುದು ವಿಶೇಷ.

ಜೆಇಇ ಮುಖ್ಯ 2025 ರ, ಪತ್ರಿಕೆ 1 ರ ಅವಧಿ 1ರಲ್ಲಿ ಕರ್ನಾಟಕದ ಇತರ ಟಾಪರ್‌ಗಳಲ್ಲಿ ಬೆಂಗಳೂರಿನ ಉದಿತ್ ಜೈಸ್ವಾಲ್ ಶೇ. 99.996 ಗಳಿಸಿದ್ದಾನೆ. ಕಗ್ಗದ...