Hyderabad, ಫೆಬ್ರವರಿ 14 -- ಹೈದರಾಬಾದ್ : ಮೂರು ದಿನಗಳ ಹಿಂದೆ ಪ್ರಕಟವಾದ ಜೆಇಇ ಮುಖ್ಯ ಪರೀಕ್ಷೆ 2025ರ ಮೊದಲನೇ ಸೆಷನ್‌ನಲ್ಲಿ ಹೈದ್ರಾಬಾದ್‌ನ ಪ್ರತಿಷ್ಠಿತ ನಾರಾಯಣ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ಬಹುತೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ನಾರಾಯಣ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಮಹತ್ವವನ್ನು ಸಾರಿದ್ದಾರೆ. ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಬನಿ ಬ್ರತಾ ಮಜೀ ಅವರು 100 ಪರ್ಸೆಂಟೈಲ್ ಗಳಿಸಿದ್ದಾರೆ. ಎಲ್ಲಾ ವಿಷಯಗಳಲ್ಲೂ ಪೂರ್ಣ 300ಕ್ಕೆ 300 ಅಂಕಗಳನ್ನು ಬನಿ ಬ್ರತಾ ಮಜೀ ಗಳಿಸಿರುವುದು ವಿಶೇಷ, ಇದು ವಿದ್ಯಾರ್ಥಿಯ ಸಮರ್ಪಣೆ ಮನೋಭಾವದ ಓದು ಮತ್ತು ನಾರಾಯಣ ಸಂಸ್ಥೆಗಳ ಕಠಿಣ ಶೈಕ್ಷಣಿಕ ವಿಧಾನಕ್ಕೆ ಸಿಕ್ಕ ಗೌರವ ಎಂದು ಸಂಸ್ಥೆ ಹೇಳಿದೆ.

ಮಜೀ ಅವರ ಜತೆಗೆ ಆಯುಷ್ ಸಿಂಘಾಲ್, ಬೆಂಗಳೂರು ಮೂಲದ ಕುಶಾಗ್ರ ಗುಪ್ತಾ, ವಿಷಾದ್ ಜೈನ್ ಮತ್ತು ಶಿವೇನ್ ವಿಕಾಸ್ ತೋಷ್ನಿವಾಲ್ ಕೂಡ 100 ಪರ್ಸೆಂಟೈಲ್‌ಗಳ ಅಂಕಗಳ ಸಾಧನೆ ಮಾಡಿ ಹಿರಿಮೆ ತಂದಿದ್...