ಭಾರತ, ಜನವರಿ 26 -- Jana Nayagan: ತಮಿಳು ನಟ ದಳಪತಿ ವಿಜಯ್‌ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಈ ಹಿಂದೆ ದಳಪತಿ 69 (Thalapathy 69) ಎಂಬ ಹೆಸರಿನಲ್ಲಿ ವಿಜಯ್‌ನ 69ನೇ ಸಿನಿಮಾವನ್ನು ಘೋಷಿಸಲಾಗಿತ್ತು. ಇದೀಗ ಈ ಸಿನಿಮಾದ ಹೆಸರು ಘೋಷಿಸಲಾಗಿದೆ. ಈ ಸಿನಿಮಾಕ್ಕೆ ಜನ ನಾಯಗನ್‌ ಎಂದು ಹೆಸರಿಡಲಾಗಿದೆ. ಕನ್ನಡದಲ್ಲಿ ಇದನ್ನು ಜನ ನಾಯಕ ಎಂದು ಅರ್ಥ ಮಾಡಿಕೊಳ್ಳಬಹುದು. ದಳಪತಿ ವಿಜಯ್‌ನ ಕೊನೆಯ ಸಿನಿಮಾ ಇದು ಎನ್ನಲಾಗಿದೆ. ಅಂದರೆ, ಇವರು ನಂತರ ರಾಜಕೀಯ ಪ್ರವೇಶಿಸಲಿದ್ದಾರೆ. ಹೀಗಾಗಿ, ಈ ಸಿನಿಮಾದ ಕುರಿತು ವಿಜಯ್‌ ಅಭಿಮಾನಿಗಳಲ್ಲಿ ನಿರೀಕ್ಷೆ ತುಸು ಹೆಚ್ಚೇ ಇದೆ.

ದಳಪತಿ ವಿಜಯ್‌ ಇಂದು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್‌) ಜನ ನಾಯಕನ್‌ ಸಿನಿಮಾದ ಕುರಿತು ಘೋಷಿಸಿದ್ದಾರೆ. ಈ ಸಿನಿಮಾದ ಹೆಸರು ಮತ್ತು ಫಸ್ಟ್‌ಲುಕ್‌ ಅನ್ನು ಇದೇ ಗಣರಾಜ್ಯೋತ್ಸವದ ದಿನ ಘೋಷಿಸಲಾಗುವುದು ಎಂದು ಕೆವಿಎನ್‌ ಪ್ರೊಡಕ್ಷನ್‌ ಕಳೆದ ಶುಕ್ರವಾರ ತಿಳಿಸಿತ್ತು. ಇದು ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿದೆ. ಅಭಿಮಾನಿಗಳು ಈ ಸಿನಿಮಾದ ಝಲಕ್ ನೋಡಲು ಕಾಯುತ...