Bengaluru, ಮಾರ್ಚ್ 27 -- ಇಂದಿನ ದಿನಗಳಲ್ಲಿ ಎಲ್ಲರೂ ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸುವುದು ಸಾಮಾನ್ಯವಾಗಿದೆ. ಮಾರುಕಟ್ಟೆಯಲ್ಲಿ ತ್ವಚೆಯ ಆರೈಕೆಗಾಗಿ ಹಲವು ಬಗೆಯ ಉತ್ಪನ್ನಗಳನ್ನು ಕಾಣಬಹುದಾಗಿದೆ. ಆದರೆ ಅವುಗಳಲ್ಲಿ ಹೆಚ್ಚಿನವು ರಾಸಾಯನಿಕಗಳಿಂದ ಕೂಡಿರುತ್ತವೆ. ನೈಸರ್ಗಿಕವಾಗಿ ತ್ವಚೆಯ ಆರೈಕೆಯನ್ನು ಮಾಡುವುದರಿಂದ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದಾಗಿದೆ. ಅಡುಗೆಮನೆಯಲ್ಲಿ ಬಳಸುವ ಪದಾರ್ಥಗಳನ್ನು ಬಳಸಿಕೊಂಡು ಫೇಸ್‌ ಮಾಸ್ಕ್‌ ಮತ್ತು ಸ್ಕ್ರಬ್‌ಗಳನ್ನು ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಬೆಲ್ಲ ಬಹಳ ಉತ್ತಮವಾಗಿದೆ. ಸಕ್ಕರೆಯ ಬದಲಿಗೆ ಬಳಸಬಹುದಾದ ಬೆಲ್ಲ ಚರ್ಮಕ್ಕೆ ಹೊಳಪು ನೀಡುವುದರ ಜೊತೆಗೆ, ಕಂದು ಬಣ್ಣವನ್ನು ತೆಗೆದುಹಾಕುತ್ತದೆ. ಮೊಡವೆ ಹಾಗೂ ಮೊಡವೆಯ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿ ಕಾಲೊಜಿನ್‌ ಉತ್ಪಾದನೆಯನ್ನು ಹೆಚ್ಚಿಸಿ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ನೈಸರ್ಗಿಕ ಸಿಹಿಕಾರವಾಗಿದೆ. ಇದರಲ್ಲಿ ಅಗತ್ಯ ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಕಬ್ಬಿಣ...