Delhi, ಮಾರ್ಚ್ 9 -- Jagdeep Dhankhar: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಭಾನುವಾರ (ಮಾರ್ಚ್ 9) ನಸುಕಿನ ವೇಳೆ ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿದೆ. ಅವರಿಗೆ ಏಮ್ಸ್‌ನ ಕ್ರಿಟಿಕಲ್ ಕೇರ್ ಯುನಿಟ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಜಗದೀಪ್ ಧನಕರ್‌ ವರಿಗೆ ನಸುಕಿನ ವೇಳೆ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಕೂಡಲೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಗದೀಪ್ ಧನಕರ್ (73) ಅವರನ್ನು ದೆಹಲಿಯ ಏಮ್ಸ್‌ನ ಕ್ರಿಟಿಕಲ್ ಕೇರ್ ಯೂನಿಟ್ (ಸಿಸಿಯು) ಗೆ ದಾಖಲಿಸಲಾಗಿದೆ. ಡಾ ರಾಜೀವ್ ನಾರಂಗ್‌ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡಿದೆ. ಡಾ ರಾಜೀವ್ ನಾರಂಗ್ ಅವರು ಏಮ್ಸ್‌ನ ಕಾರ್ಡಿಯೋಲಜಿ ವಿಭಾಗದ ಮುಖ್ಯಸ್ಥರು. ಜಗದೀಪ್ ಧನಕರ್ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ತಂಡ ನಿಗಾವಹಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.

Published by HT Digital Content Services with permission ...