ಭಾರತ, ಫೆಬ್ರವರಿ 27 -- ITR Checklist 2025: ಮಾರ್ಚ್ 31 ಅನ್ನು ಆರ್ಥಿಕ ವರ್ಷದ ಕೊನೆಯ ದಿನ ಎಂದು ಪರಿಗಣಿಸಲಾಗುತ್ತದೆ. 2024-25ನೇ ಸಾಲಿನ ಆರ್ಥಿಕ ವರ್ಷದ ಅಂತ್ಯ ಹತ್ತಿರದಲ್ಲೇ ಇದೆ. ಪ್ರತಿ ತೆರಿಗೆದಾರರು ಮಾರ್ಚ್‌ 31 ಮುಗಿಯುವ ಮೊದಲು ಕೆಲವು ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಮುಗಿಸಬೇಕಿದೆ. ಇದು ಹಣಕಾಸಿನ ವರ್ಷದ ಅಂತ್ಯಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿರುವ ಗಡುವಾಗಿದೆ.

ನೀವು ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಐಟಿಆರ್‌ ಸಲ್ಲಿಸಬೇಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ತೆರಿಗೆ ಅಥವಾ ಹೂಡಿಕೆ ವಿವರಗಳನ್ನು ಸಮರ್ಪಕವಾಗಿ ನಮೂದಿಸಬೇಕು. ಐಟಿಆರ್‌ ಸಲ್ಲಿಸುವ ಸಮಯದಲ್ಲಿ ಸಾರ್ವಜನಿಕ ಭವಿಷ್ಯ ನಿಧಿಗಳಿಗೆ (PPF) ನೀಡುವ ಕೊಡುಗೆಗಳಿಂದ ಹಿಡಿದು ತೆರಿಗೆ ಉಳಿಸುವ ಸ್ಥಿರ ಠೇವಣಿಗಳಲ್ಲಿನ ಹೂಡಿಕೆಗಳ ಮಾಹಿತಿಯವರೆಗೆ ಎಲ್ಲದರ ಲೆಕ್ಕ ಸಲ್ಲಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ತಮ್ಮ ಆದಾಯದಲ್ಲಿ ತೆರಿಗೆ ಕಡಿತ ಕಡಿಮೆಗೊಳಿಸಲು, ಆದಾಯ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಹೆಚ್ಚಿಸಿಕೊಳ್ಳಲು ಆದಾಯ ತೆರಿಗೆ ಪಾವತಿದ...