ಭಾರತ, ಏಪ್ರಿಲ್ 12 -- ಬೆಂಗಳೂರು ಎಫ್‌ಸಿ ಕನಸು ಮತ್ತೊಮ್ಮೆ ಭಗ್ನವಾಗಿದೆ. 2023ರ ಫಲಿತಾಂಶವೇ ಮತ್ತೊಮ್ಮೆ ಪುನರಾವರ್ತನೆಯಾಗಿದೆ. ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ಮಣಿಸಿದ ಮೋಹನ್ ಬಗಾನ್ ಸೂಪರ್ ಜೈಂಟ್ ತಂಡವು ಮತ್ತೊಮ್ಮೆ ಐಎಸ್‌ಎಲ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಅತ್ತ ಎರಡನೇ ಬಾರಿಗೆ ಐಎಸ್‌ಎಲ್‌ ಚಾಂಪಿಯನ್‌ ಆಗಿ ಮಿಂಚುವ ಬೆಂಗಳೂರು ಎಫ್‌ಸಿ ಕನಸು ನುಚ್ಚುನೂರಾಗಿದೆ.

ಕೋಲ್ಕತ್ತಾದ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೋಹನ್‌ ಬಗಾನ್‌ ತಂಡವು 2-1 ಅಂತರದಲ್ಲಿ ಗೆದ್ದು ಬೀಗಿದೆ. ಕಿಕ್ಕಿರಿದು ತುಂಬಿದ್ದ ತವರಿನ ಅಭಿಮಾನಿಗಳ ನಿರಂತರ ಬೆಂಬಲದ ನಡುವೆ ತವರಿನ ತಂಡ ಗೆದ್ದು ಬೀಗಿದೆ. ಪಂದ್ಯದ ನಿಗದಿತ ಅವಧಿಯಲ್ಲಿ 1-1 ಅಂತರದಿಂದ ಅಂಕ ಸಮಬಲವಾಗಿತ್ತು. ಹೀಗಾಗಿ ಹೆಚ್ಚುವರಿ ಅವಧಿ ನೀಡಲಾಯ್ತು. ಆ ಸಮಯದಲ್ಲಿ ಮತ್ತೊಂದು ಗೋಲು ಕಲೆಹಾಕಿದ ತಂಡ ಜಯಭೇರಿ ಬಾರಿಸಿತು.

ಪಂದ್ಯದಲ್ಲಿ ಬೆಂಗಳೂರು ಪರ ಆಲ್ಬರ್ಟೊ ರೊಡ್ರಿಗಸ್ 49ನೇ ನಿಮಿಷದಲ್ಲಿ ಮೊದಲ...