ಭಾರತ, ಮಾರ್ಚ್ 11 -- Vistadome Tour Package: ಇದೀಗ ಶಾಲಾ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆ ಮುಗಿದ ಕೂಡಲೇ ಬೇಸಿಗೆ ರಜೆ ಆರಂಭವಾಗುತ್ತದೆ. ಬೇಸಿಗೆ ರಜೆ ಎಂದಾಕ್ಷಣ ಮಕ್ಕಳು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಪೋಷಕರನ್ನು ಪೀಡಿಸುತ್ತಾರೆ. ಈ ವರ್ಷದ ಬೇಸಿಗೆ ರಜೆಗೆ ಮಕ್ಕಳನ್ನು ಕರಾವಳಿ ಭಾಗಕ್ಕೆ ಕರೆದುಕೊಂಡು ಹೋಗಬೇಕು ಎನ್ನುವ ಪ್ಲಾನ್ ಇದ್ದರೆ ನಿಮಗಾಗಿ ಇಲ್ಲಿದೆ ಟೂರ್ ಪ್ಯಾಕೇಜ್ ವಿವರ.

ಐಆರ್‌ಸಿಟಿಸಿಯ ಈ ಟೂರ್ ಪ್ಯಾಕೇಜ್‌ನಲ್ಲಿ ನೀವು ವಿಸ್ಟಾಡೋಮ್ ಟ್ರೈನ್‌ನಲ್ಲಿ ಪ್ರಯಾಣ ಮಾಡಬಹುದು. ವಿಸ್ಟಾಡೋಮ್‌ ಟ್ರೈನ್‌ನಲ್ಲಿ ಟ್ರಾವೆಲ್ ಮಾಡೋದೇ ಮಕ್ಕಳಿಗೆ ಸಖತ್ ಥ್ರಿಲ್ಲಿಂಗ್ ಅನುಭವ ಕೊಡುತ್ತೆ. ಇದರೊಂದಿಗೆ ಕರಾವಳಿಯ ಪ್ರಸಿದ್ಧ ದೇಗುಲಗಳನ್ನು ನೀವು ನೋಡಿ ಬರಬಹುದು.

ಈ ಟೂರ್‌ ಪ್ಯಾಕೇಜ್‌ ಮೂಲಕ ನೀವು ಕಟೀಲು-ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯ ದೇಗುಲಗಳನ್ನು ನೋಡಿ ಬರಬಹುದು. 2 ರಾತ್ರಿ ಹಾಗೂ 3 ದಿನಗಳ ಪ್ಯಾಕೇಜ್ ಇದಾಗಿದೆ.

ಕರಾವಳಿ ಭಾಗದ ಈ 3 ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡುವ ಜೊತೆಗೆ ಮಂಗಳೂರ...