ಭಾರತ, ಮಾರ್ಚ್ 11 -- ಹಲವು ಪ್ರಸಿದ್ಧ ಪುಣ್ಯಕ್ಷೇತ್ರಗಳು ಉತ್ತರ ಭಾರತದಲ್ಲಿವೆ. ಇಲ್ಲಿನ ಕಾಶಿ, ಗಯಾ, ಬೋಧ್‌ ಗಯಾ, ಕುಂಭಮೇಳ ನಡೆಯುವ ಪ್ರಯಾಗ್‌ರಾಜ್‌, ಶ್ರೀರಾಮನ ಅಯೋಧ್ಯೆ ಪ್ರವಾಸ ಮಾಡಬೇಕೆಂಬ ಆಸೆ ಭಾರತೀಯರದ್ದು. ಕರ್ನಾಟಕದಿಂದ ಉತ್ತರ ಪ್ರದೇಶದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ದೊಡ್ಡದಿದೆ. ಅದಕ್ಕೆ ತಕ್ಕನಾಗಿ ಐಆರ್‌ಸಿಟಿಸಿ (IRCTC Package) ಕೂಡಾ ಒಂದೊಳ್ಳೆ ಟೂರ್‌ ಪ್ಯಾಕೇಟ್‌ ಕೊಡುತ್ತಿದೆ. ಬೆಂಗಳೂರಿನಿಂದ ಕಾಶಿ (ವಾರಣಾಸಿ) ಹೋಗಿ ಬರಬಹುದು. ಈ ಪ್ಯಾಕೇಜ್‌ ನೀವು ಆಯ್ಕೆ ಮಾಡಿಕೊಂಡರೆ ನಾಲ್ಕು ಪುಣ್ಯಕೇತ್ರಗಳ ದರ್ಶನ ಮಾಡಬಹುದು. 6 ದಿನ ಹಾಗೂ 5 ರಾತ್ರಿಗಳ ಈ ಅಯೋಧ್ಯೆ ಟೂರ್‌ ಪ್ಯಾಕೇಜ್‌ನಲ್ಲಿ ಯಾವೆಲ್ಲಾ ಸ್ಥಳಗಳು ಇರಲಿವೆ ಹಾಗೂ ಪ್ರವಾಸ ಸಮಯದ ಕುರಿತ ವಿವರ ಇಲ್ಲಿ ಓದಿ.

ಒಬ್ಬರೇ ಆಗಿದ್ದರೆ 50,900 ರೂ ವೆಚ್ಚವಾಗುತ್ತದೆ. ಇಬ್ಬರಿದ್ದರೆ ಡಬಲ್‌ ಆಕ್ಯುಪೆನ್ಸಿಗೆ ವೆಚ್ಚ ಕಡಿಮೆಯಾಗಲಿದ್ದು ಒಬ್ಬರಿಗೆ 38,500 ರೂಪಾಯಿಯಂತೆ ಬೀಳಲಿದೆ. ಇದೇ ವೇಳೆ ಮೂವರಿಗೆ 37,500 ರೂ ಆಗಲಿದೆ. 5ರಿಂದ 11 ವರ್ಷದ...