ಭಾರತ, ಮಾರ್ಚ್ 16 -- IRCTC Goa Package: ಗೋವಾ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಗೋವಾ ಚಿಕ್ಕ ರಾಜ್ಯವಾದ್ರೂ ಪ್ರವಾಸೋದ್ಯಮ ದೃಷ್ಟಿಯಿಂದ ಸಾಕಷ್ಟು ಮುಂದುವರಿದಿದೆ. ಗೋವಾ ಕೇವಲ ಭಾರತೀಯರಿಗೆ ಮಾತ್ರವಲ್ಲ ವಿದೇಶಿಗರಿಗೂ ಅಚ್ಚುಮೆಚ್ಚು. ಆ ಕಾರಣಕ್ಕೆ ಉತ್ತರ ಗೋವಾದಲ್ಲಿ ನಮಗೆ ವಿದೇಶಕ್ಕೆ ಹೋದ ಅನುಭವ ಸಿಗುತ್ತದೆ. ಸುಂದರ ಕಡಲ ತೀರಗಳಲ್ಲಿ ಸುತ್ತಾಡೋದು ನಿಮಗೆ ಇಷ್ಟ ಅಂದ್ರೆ ನೀವು ಜೀವನದಲ್ಲಿ ಒಮ್ಮೆಯಾದ್ರೂ ಗೋವಾಕ್ಕೆ ಭೇಟಿ ನೀಡಬೇಕು.

ಗೋವಾ ಟ್ರಿಪ್‌ ಬೇಸಿಗೆಯಲ್ಲಿ ಚೆನ್ನಾಗಿರುತ್ತೆ, ಬಿಸಿಲಿನ ತಾಪ ಹೆಚ್ಚಿದ್ದರೂ ಸಂಜೆ ಸಮಯದಲ್ಲಿ ಅಲ್ಲಿನ ಕಡಲ ತೀರಗಳು ಸ್ವರ್ಗದಂತೆ ಕಾಣಿಸುವುದು ಸುಳ್ಳಲ್ಲ. ಅದರಲ್ಲೂ ನೀವು ಸೀಫುಡ್‌ ಪ್ರೇಮಿಯಾದ್ರೆ ಗೋವಾಕ್ಕೆ ಭೇಟಿ ನೀಡೋದು ಮಿಸ್ ಮಾಡಲೇಬಾರದು. ಈ ಬೇಸಿಗೆ ರಜೆಯಲ್ಲಿ ನೀವು ಮಕ್ಕಳ ಜೊತೆ ಕೂಡ ಗೋವಾ ಟ್ರಿಪ್ ಪ್ಲಾನ್ ಮಾಡಬಹುದು. ಗೋವಾಕ್ಕೆ ಬೆಂಗಳೂರಿನಿಂದ ವಾರಕ್ಕೊಮ್ಮೆ ವಿಶೇಷ ಟೂರ್ ಪ್ಯಾಕೇಜ್ ಇದೆ. ಈ ಟೂರ್ ಪ್ಯಾಕೇಜ್ ದರ ಎಷ್ಟು, ಯಾವೆಲ್ಲಾ ಸ್ಥಳಗಳನ್ನು ನೋಡಬಹು...