ಭಾರತ, ಮಾರ್ಚ್ 13 -- Assam Meghalaya IRCTC Tour Package: ಈ ವರ್ಷ ಸಿಕ್ಕಾಪಟ್ಟೆ ಬಿಸಿಲು, ಬೆಂಗಳೂರಲ್ಲೂ ಹೊರಗಡೆ ಹೋದ್ರೆ ಮೈಯೆಲ್ಲಾ ಸುಡುತ್ತೆ ಅನ್ನಿಸುವ ತಾಪ. ಬೇಸಿಗೆಯಲ್ಲಿ ಹೊರಗಡೆ ಸುತ್ತಾಡೋದೆ ಬೇಡ ಅನ್ನಿಸುತ್ತೆ. ಹಾಗಂತ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ವರ್ಷಪೂರ್ತಿ ಓದು, ಹೋಮ್‌ವರ್ಕ್ ಅಂತ ಕಳೆಯುವ ಮಕ್ಕಳು ಬೇಸಿಗೆ ರಜೆಯಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಎಂದು ಪೋಷಕರಿಗೆ ದುಂಬಾಲು ಬೀಳುವುದು ಸಹಜ. ಬೀಚ್‌ಗೆಲ್ಲಾ ಬೇಸಿಗೆಯಲ್ಲಿ ಹೋಗೋದು ಆಗದ ಮಾತು.

ಹಾಗಿದ್ದಾಗ ನೀವು ತಂಪಾಗಿರುವ ಜಾಗಗಳಿಗೆ ಪ್ರವಾಸ ಹೋಗೋದು ಬೆಸ್ಟ್. ಅದಕ್ಕಾಗಿ ಸ್ವಿಡನ್‌, ಸ್ವಿಟ್ಜರ್ಲೆಂಡ್ ಹೋಗಬೇಕು ಅಂತಿಲ್ಲ. ಭಾರತದಲ್ಲಿ ಬೇಸಿಗೆಯಲ್ಲೂ ತಂಪಾಗಿರುವ ತಾಣಗಳಿವೆ. ಈ ಜಾಗಗಳಿಗೆ ಹೋದ್ರೆ ನೀವು ನಿಮ್ಮ ಪ್ರವಾಸದ ಕ್ಷಣಗಳನ್ನು ಎಂಜಾಯ್ ಮಾಡೋದ್ರರಲ್ಲಿ ಡೌಟೇ ಇಲ್ಲ. ನೀವು ಮದುವೆಯಾಗುತ್ತಿದ್ದು ಹನಿಮೂನ್‌ಗೆ ಹೋಗಬೇಕು ಅಂತಿದ್ರೂ ಈ ತಾಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂತಹ ಸ್ಥಳಗಳಲ್ಲಿ...