ಭಾರತ, ಮಾರ್ಚ್ 11 -- ಭಾರತದ ಮುಕುಟದಂತಿರುವ ಕಾಶ್ಮೀರ ಪ್ರವಾಸ ಮಾಡಬೇಕು ಅನ್ನೋದು ಬಹುತೇಕ ಹಲವರ ಆಸೆ-ಕನಸು. ಈಗಂತೂ ಭಾರಿ ಸೆಕೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬಹುತೇಕ ಎಲ್ಲಾ ಕಡೆ ತಾಪಮಾನ ಹೆಚ್ಚಾಗಿದ್ದು, ಬಿಸಿಲಿಗೆ ಬೆಂದ ಜನ ತಂಪಾದ ವಾತಾವರಣ ಇಷ್ಟಪಡುತ್ತಾರೆ. ಹೀಗಾಗಿ ಕಾಶ್ಮೀರವೋ, ಮನಾಲಿಯೋ ಸುತ್ತಾಡಲು ಇದು ಸಕಾಲ. ನಿಮ್ಮ ಪ್ರವಾಸ ಪಟ್ಟಿಗೆ ಈ ಬಾರಿ ಕಾಶ್ಮೀರವನ್ನು ಸೇರಿಸಬಹುದು. ಏಕೆಂದರೆ ಐಆರ್‌ಸಿಟಿಸಿಯು (IRCTC) ಕಾಶ್ಮೀರ ಟೂರ್‌ ಪ್ಯಾಕೆಜ್‌ ಘೋಷಿಸಿದ್ದು, 6 ದಿನಗಳ ಪ್ರವಾಸವನ್ನು ನೀವು ಆನಂದಿಸಬಹುದು. ಬೆಂಗಳೂರಿನಿಂದ ಆರಂಭವಾಗಿ 5 ರಾತ್ರಿ ಮತ್ತು 6 ದಿನ ಕಾಶ್ಮೀರದಲ್ಲಿ ಕಳೆಯಬಹುದು.

ಬೆಂಗಳೂರಿನ ಐಆರ್‌ಸಿಟಿಸಿಯೊಂದಿಗೆ ಭೂಮಿಯ ಮೇಲಿನ ಸ್ವರ್ಗ ಕಾಶ್ಮೀರದ ಸೌಂದರ್ಯವನ್ನು ಸವಿಯಬಹುದು. ಪ್ರವಾಸಪ್ರಿಯರು ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಸ್ವರ್ಗಕ್ಕೆ ಭೇಟಿ ನೀಡಬೇಕೆಂಬ ಕನಸು ಕಾಣುತ್ತಾರೆ. ಇಲ್ಲಿನ ಚಿನಾರ್ ಮರಗಳು, ದಟ್ಟವಾದ ದೇವದಾರು ಕಾಡುಗಳು, ಸೇಬಿನ ತೋಟ, ಕೇಸರಿ ಹೊಲಗಳು, ಹಿಮಾವೃತ ಪರ್ವತಗಳು, ಗಿ...