ಭಾರತ, ಮಾರ್ಚ್ 12 -- Char Dham IRCTC Tour Package: ಹಿಂದೂಗಳಲ್ಲಿ ಚಾರ್ ಧಾಮ್ ಯಾತ್ರೆಗೆ ವಿಶೇಷ ಮಹತ್ವವಿದೆ. ಹಲವರು ಜೀವನದಲ್ಲಿ ಒಮ್ಮೆಯಾದ್ರೂ ನಾವು ಚಾರ್ ಧಾಮ್ ಯಾತ್ರೆ ಕೈಗೊಳ್ಳಬೇಕು ಎನ್ನುವ ಕನಸು ಕಂಡಿರುತ್ತಾರೆ. ಚಾರ್ ಧಾಮ್ ಎಂದರೆ ಬದ್ರಿನಾಥ್‌, ಕೇದಾರನಾಥ್‌, ಗಂಗೋತ್ರಿ, ಯಮುನೋತ್ರಿ ಈ 4 ಪವಿತ್ರ ಸ್ಥಳಗಳನ್ನು ಒಳಗೊಂಡ ಯಾತ್ರೆ. ಚಾರ್‌ ಧಾಮ್‌ಗೆ ಭೇಟಿ ನೀಡಿ ದೇವರ ದರ್ಶನ ಪಡೆದರೆ ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆಯೂ ಹಿಂದೂಗಳಲ್ಲಿದೆ.

ಈ ಪವಿತ್ರ ಸ್ಥಳಕ್ಕೆ ನೀವು ಹೋಗುವ ಬಯಕೆ ಹೊಂದಿದ್ದರೆ ಈ ಬಾರಿಯ ಚಾರ್‌ಧಾಮ್ ಯಾತ್ರೆ ಮೇ ತಿಂಗಳಿನಿಂದ ಆರಂಭವಾಗಲಿದೆ. ನಿಮ್ಮ ಚಾರ್ ಧಾಮ್ ಯಾತ್ರೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಐಆರ್‌ಸಿಟಿಸಿ (ಭಾರತೀಯ ರೈಲ್ವೆ) ಟೂರ್‌ ಪ್ಯಾಕೇಜ್‌ ಅನ್ನು ಘೋಷಿಸಿದೆ. ಈ ಟೂರ್ ಪ್ಯಾಕೇಜ್ ಮೂಲಕ ನೀವು ಚಾರ್ ಧಾಮ್ ಯಾತ್ರೆಗೆ ಯಾವುದೇ ಅಡೆತಡೆಗಳಿಲ್ಲದೇ ಹೋಗಿ ಬರಬಹುದು. ಒಟ್ಟು 13 ದಿನಗಳ ಪ್ಯಾಕೇಜ್ ಇದಾಗಿದೆ. ಈ ಪ್ಯಾಕೇಜ್‌ನಲ್ಲಿ ಯಾವೆಲ್ಲಾ ಸ್ಥಳಗಳನ್ನು ನೋಡಬಹುದು, ದರ ವಿವರ...