ಭಾರತ, ಮಾರ್ಚ್ 15 -- ವಿಶ್ವದ ಸಿಲಿಕಾನ್‌ ಸಿಟಿ, ಉದ್ಯಾನ ನಗರಿ ಎಂದು ಕರೆಯಲ್ಪಡುವ ಬೆಂಗಳೂರು, ಭಾರತದ ಮೂರನೇ ಅತಿದೊಡ್ಡ ನಗರ. ಇದೇ ವೇಳೆ ಅರಮನೆಗಳ ನಗರಿ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಉಭಯ ನಗರಗಳು ಕೆಲವೇ ಗಂಟೆಗಳಲ್ಲಿ ಪ್ರಯಾಣಿಸಬಹುದಾದಷ್ಟು ಹತ್ತಿರವಿದೆ. ಈಗಂತೂ ಎಕ್ಸ್‌ಪ್ರೆಸ್‌ ವೇ ಇದ್ದು, ಇನ್ನೂ ಸುಲಭ. ಆದರೂ ಈ ಎರಡು ನಗರಗಳು ಮತ್ತು ಅಲ್ಲಿರುವ ಪ್ರಸಿದ್ಧ ಸ್ಥಳಗಳನ್ನು ಸರಿಯಾಗಿ ನೋಡದವರು ಹಲವು ಮಂದಿ ಇದ್ದಾರೆ. ಬೆಂಗಳೂರಿನಲ್ಲಿ ಇದ್ದರೂ ಅಥವಾ ನಗರದಿಂದ ಹೊರಗಿದ್ದರೂ, ಕರ್ನಾಟಕದಲ್ಲಿಯೇ ರಾಜ್ಯದ ಎರಡು ಪ್ರಮುಖ ನಗರಗಳನ್ನು ನೋಡದಿದ್ದರೆ ಹೇಗೆ. ಇದಕ್ಕಾಗಿಯೇ ಐಆರ್‌ಸಿಟಿಸಿಯ (IRCTC Package) ಈ ಟೂರ್‌ ಪ್ಯಾಕೇಜ್ ನಿಮಗಾಗಿ ಇದೆ. ಎರಡು ರಾತ್ರಿ ಹಾಗೂ 3 ದಿನಗಳನ್ನು ಈ ಪ್ರವಾಸಕ್ಕಾಗಿ ಮೀಸಲಿಟ್ಟರೆ ಸಾಕು. ಕಾರಿನಲ್ಲಿ ಆರಾಮದಾಯಕ ಪ್ರಯಾಣ ಸವಿಯಬಹುದು.

ಕರ್ನಾಟಕದ ಯಾವುದೇ ಮೂಲೆಯಲ್ಲಿದ್ದರೂ ಈ ಪ್ಯಾಕೇಜ್‌ ಆಯ್ಕೆ ಮಾಡಿಕೊಂಡು ಪ್ಯಾಕೇಜ್‌ನಿಂದ ಕೊಡುವಂತೆಯೇ ವಾಸ್ತವ್ಯ ಹೂಡಬಹುದು. ಈ ಪ್ಯಾಕೇಜ್‌ ಅಡಿ...