ಭಾರತ, ಮಾರ್ಚ್ 13 -- ದೇವಾಲಯಗಳ ನಾಡು ತಮಿಳುನಾಡಿನಲ್ಲಿ ಹಲವು ಪ್ರಸಿದ್ಧ ದೇವಾಲಯಗಳಿವೆ. ಶ್ರೀರಂಗಂ, ರಾಮೇಶ್ವರಂ, ಮಧುರೈ ಹೀಗೆ ಪುರಾಣಪ್ರಸಿದ್ಧ ಹಳೆಯ ದೇಗುಲಗಳು ಹಾಗೂ ಪ್ರಮುಖ ಪ್ರವಾಸಿ ಸ್ಥಳಗಳಿವೆ. ಇಲ್ಲಿನ ದೇಗುಲ ದರ್ಶನ ಮಾಡೋಕೆ ಐಆರ್‌ಸಿಟಿಸಿಯ ಅತ್ಯುತ್ತಮ ಟೂರ್‌ ಪ್ಯಾಕೇಜ್‌ ಇದೆ. ರೈಲಿನ ಮೂಲಕ ಹೋಗಿ ಬರುವ 5 ದಿನದ ಈ ಪ್ರವಾಸದಲ್ಲಿ ನೀವು ಕನ್ಯಾಕುಮಾರಿ, ರಾಮೇಶ್ವರಂ ಹಾಗೂ ಮಧುರೈಗೆ ಹೋಗಿ ಮೀನಾಕ್ಷಿ ಅಮ್ಮನ ದರ್ಶನ ಮಾಡಬಹುದು. ರೈಲು ಪ್ರವಾಸ ಆಗಿರುವುದರಿಂದ ಆರಾಮದಾಯಕ ಪ್ರಯಾಣದ ಖಚಿತತೆ ಇರುತ್ತದೆ.

ಕನ್ಯಾಕುಮಾರಿಯು ಭಾರತದ ದಕ್ಷಿಣದ ಕೊನೆಯ ಬಿಂದುವಾಗಿದ್ದು, ಬಂಗಾಳಕೊಲ್ಲಿ, ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾಸಾಗರಗಳ ಸಂಗಮ ಸ್ಥಳವಾಗಿದೆ. ಹಿಂದೂಗಳ ಪವಿತ್ರ ಯಾತ್ರಾಸ್ಥಳವಾಗಿಯೂ ಇದು ಪ್ರಾಮುಖ್ಯತೆ ಪಡೆದಿದೆ. ಇಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ಎರಡನ್ನೂ ಸವಿಯಬಹುದು.

ಅತ್ತ ರಾಮೇಶ್ವರಂ ಭಾರತದ ಪವಿತ್ರ ಶಿವ ದೇವಾಲಯಗಳಲ್ಲಿ ಒಂದಾಗಿದ್ದು, ರಾಮನಾಥಸ್ವಾಮಿಗೆ ಸಮರ್ಪಿತವಾಗಿದೆ. "ದಕ್ಷಿಣದ ಬನಾರಸ್" ಎಂದೂ ಕರ...