ಭಾರತ, ಮಾರ್ಚ್ 14 -- ಉತ್ತರ ಭಾರತ ಪ್ರವಾಸ ದುಬಾರಿ ಎಂಬ ಯೋಚನೆ ಹಲವರಲ್ಲಿದೆ. ಅದರಲ್ಲೂ ಹೆಚ್ಚು ದಿನವೂ ಬೇಕು ಎಂಬ ಲೆಕ್ಕಾಚಾರ ಇನ್ನೊಂದು ಕಡೆ. ಉತ್ತರ ಪ್ರದೇಶದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ದೆಹಲಿ, ಆಗ್ರಾ, ಜೈಪುರಕ್ಕೆ ಅಗ್ರಸ್ಥಾನ. ಆಗ್ರಾದಲ್ಲಿರುವ ಪ್ರೇಮಸೌಧ ತಾಜ್‌ಮಹಲ್‌, ಮೊಘಲ್ ಸಾಮ್ರಾಜ್ಯ ಮತ್ತು ರಜಪೂತ ರಾಜವಂಶದ ವಾಸ್ತುಶಿಲ್ಪವು ಪ್ರವಾಸಿಗರನ್ನು ಕರೆಯುತ್ತದೆ. ಇನ್ನೊಂದೆಡೆ ಪಿಂಕ್‌ ಸಿಟಿ ಜೈಪುರ ನೋಡಲೇಬೇಕಾದ ನಗರ. ನಿಮ್ಮ ಪ್ರವಾಸದ ಮೋಹಕ್ಕಾಗಿ ಐಆರ್‌ಸಿಟಿಸಿಯ (IRCTC Package) ಅತ್ಯುತ್ತಮ ಟೂರ್‌ ಪ್ಯಾಕೇಜ್‌ಗಳಿವೆ. ಕರ್ನಾಟಕದ ಜನರಿಗಾಗಿ ಬೆಂಗಳೂರಿನಿಂದ ಹೊರಟು ಮತ್ತೆ ಬೆಂಗಳೂರಿಗೆ ಬರುವ ದೆಹಲಿ -ಆಗ್ರಾ -ಜೈಪುರ ಪ್ರವಾಸ ಪ್ಯಾಕೇಜ್‌ ಆಯ್ಕೆ ಮಾಡಬಹುದು. ವಿವರಗಳು ಮುಂದಿವೆ.

10 ದಿನಗಳ ಪ್ರವಾಸಕ್ಕೆ ಒಬ್ಬರಿಗೆ 46,600 ರೂ ವೆಚ್ಚವಾಗಲಿದೆ. ಇಬ್ಬರು ಶೇರಿಂಗ್‌ ಆದರೆ, ತಲಾ 32,500 ರೂ ವೆಚ್ಚವಾಗಲಿದೆ. ಮೂರು ಜನರಿಗೆ ಶೇರಿಂಗ್‌ ತಲಾ 30,700 ರೂ ಆಗಲಿದೆ.

ಮೊದಲ ದಿನ (31.03.2025) ರೈಲು ಸಂಖ್ಯೆ 1...