Bangalore, ಮಾರ್ಚ್ 5 -- IPS Posting: ಕರ್ನಾಟಕ ಸರ್ಕಾರವು ಹಿರಿಯ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಆಂತರಿಕಾ ಭದ್ರತಾ ಪೊಲೀಸ್‌ ವಿಭಾಗದಲ್ಲಿ ಮಹಾ ನಿರೀಕ್ಷಕರಾಗಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಮತ್ತೊಮ್ಮೆ ಬೇರೆ ಇಲಾಖೆಗೆ ವರ್ಗ ಮಾಡಲಾಗಿದೆ. ರೂಪಾ ಅವರು ರೇಷ್ಮೆ ಇಲಾಖೆ ಅಡಿಯಲ್ಲಿ ಬರುವ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕ ಮಾಡಿದೆ. ಈ ಹಿಂದೆ ರೂಪಾ ಅವರು ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈಗ ಮತ್ತೊಂದು ನಿಗಮದ ಎಂಡಿಯಾಗಿ ನೇಮಕಗೊಂಡಿದ್ದಾರೆ. ಆಂತರಿಕ ಭದ್ರತಾ ವಿಭಾಗದ ಡಿಐಜಿಯಾಗಿದ್ದ ವರ್ತಿಕಾ ಕಟಿಯಾರ್‌ ಅವರೊಂದಿಗೆ ಸಂಘರ್ಷ ಮಾಡಿಕೊಂಡು ಕಾರಣದಿಂದ ವರ್ಗ ಮಾಡಲಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿದ್ದ ಡಿ.ರೂಪಾ ಅವರು ನಕ್ಸಲ್‌ ನಿಗ್ರಹ ಘಟಕದ ಮೇಲುಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದರು....