Bangalore, ಮಾರ್ಚ್ 3 -- IPS Posting:: ಕರ್ನಾಟಕದಲ್ಲಿ ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳ ನಡುವೆ ಸಂಘರ್ಷ ನಡೆದಿದ್ದು. ಈ ವಿಚಾರವಾಗಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದ ‌ ಅಧಿಕಾರಿಯನ್ನೇ ವರ್ಗಾವಣೆ ಮಾಡಲಾಗಿದೆ. ಕರ್ನಾಟಕದ ಆಂತರಿಕ ಭದ್ರತಾ ವಿಭಾಗದಲ್ಲಿ ಐಜಿಪಿಯಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಹಾಗೂ ಮತ್ತೊಬ್ಬ ಐಪಿಎಸ್‌ ಅಧಿಕಾರಿ ಹಾಗೂ ಕರ್ನಾಟಕ ಆಂತರಿಕ ಭದ್ರತಾ ವಿಭಾಗದಲ್ಲಿ ಡಿಐಜಿಯಾಗಿರುವ ವರ್ತಿಕಾ ಕಟಿಯಾರ್‌ ಅವರ ನಡುವೆ ಸಂಘರ್ಷ ನಡೆದಿದೆ. ರೂಪಾ ವಿರುದ್ದ ವರ್ತಿಕಾ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದರು. ದೂರು ನೀಡಿದ ಬೆನ್ನಲ್ಲೇ ವರ್ತಿಕಾ ಕಟಿಯಾರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಆಂತರಿಕ ಭದ್ರಾ ವಿಭಾಗದಿಂದ ಗೃಹರಕ್ಷಕ ದಳಕ್ಕೆ ವರ್ಗ ಮಾಡಿ ಆದೇಶವನ್ನು ಸೋಮವಾರ ಹೊರಡಿಸಲಾಗಿದೆ.

ಇಬ್ಬರು ಆಂತರಿಕ ಭದ್ರತಾ ಪೊಲೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಡಿ.ರೂಪಾ ಮೌದ್ಗಿಲ್‌ ಅವರು ಐಜಿಪಿಯಾಗಿದ್ದರೆ, ವರ್ತಿಕಾ ಕಟಿಯಾರ್‌ ಅವರು ಡಿ...