Bangalore, ಏಪ್ರಿಲ್ 9 -- ಹಬ್ಬ, ಪ್ರವಾಸ ಇತ್ಯಾದಿ ಕಾರ್ಯಕ್ರಮಗಳಿಗೆ ಯಾವುದೇ ಕಂಪನಿಯಲ್ಲಿ ಸುಲಭವಾಗಿ ರಜೆ ಸಿಗುವುದಿಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬಂತೆ ಮೇಲಿನ ಬಾಸ್ ರಜಾ ನೀಡದೆ ಕಾಡಿಸುವುದೇ ಹೆಚ್ಚು. ಅದರಲ್ಲೂ ಮಹಿಳಾ ಉದ್ಯೋಗಿಗಳಿಗೆ ರಜಾ ನೀಡದೆ ಮಜಾ ತೆಗೆದುಕೊಳ್ಳುವ ಬಾಸ್ ಗಳಿಗೇನೂ ಕೊರತೆ ಇಲ್ಲ. ಇನ್ನು ಐಪಿಎಲ್ ಮ್ಯಾಚ್ ನೋಡಲು ಬಾಸ್‌ ರಜೆ ನೀಡುವುದು ಸಾಧ್ಯವೇ ಇಲ್ಲ. ಆದರೆ ಇಲ್ಲೊಬ್ಬ ಮಹಿಳಾ ಉದ್ಯೋಗಿ ಮನೆಯಲ್ಲಿ ತುರ್ತು ಕೆಲಸ ಇದೆ ಎಂದು ಹೇಳಿ ಅರ್ಧಕ್ಕೆ ಲಾಗ್ ಔಟ್ ಆಗಿ ಕಚೇರಿಯಿಂದ ಹೊರಟಿದ್ದಾರೆ.

ಹೇಳಿಕೇಳಿ ಆಕೆ ರಾಯಲ್ ಚಾಲೆಂಜರ್ಸ್ ಅಭಿಮಾನಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ವೀಕ್ಷಿಸಲು ತೆರಳಿದ್ದಾರೆ. ಆಕೆಯ ದುರಾದೃಷ್ಟ, ಬಾಸ್ ಈಕೆಯನ್ನು ಟಿವಿಯಲ್ಲಿ ನೋಡಿದ್ದಾರೆ. ಈ ರೀತಿ ಸುಳ್ಳು ಹೇಳಿ ಪಂದ್ಯ ವೀಕ್ಷಿಸಿದ್ದು ನೇಹಾ ದ್ವಿವೇದಿ.

ಟಿವಿಯಲ್ಲಿ ನೋಡಿದ ನಂತರ ಬಾಸ್ ನೀವು ಆರ್ ಸಿಬಿ ಅಭಿಮಾನಿಯೇ? ನಿನ್...