ಭಾರತ, ಏಪ್ರಿಲ್ 13 -- IPL 2025 Betting: ಐಪಿಎಲ್‌ ಕ್ರಿಕೆಟ್‌ ನಡೆಯುತ್ತಿರುವಾಗಲೇ ಆನ್‌ಲೈನ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಧ್ರುವ್‌ ಮಿತ್ತಲ್, ರೋಹಿತ್ ರಂಜನ್ ಹಾಗೂ ವಿಜಯ್ ಕುಮಾರ್ ಬಂಧಿತ ಆರೋಪಿಗಳು. ಇವರಿಂದ ರೂ. 85 ಲಕ್ಷ ನಗದು ಹಾಗೂ ಬೆಟ್ಟಿಂಗ್ ಟೋಕನ್‌ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್‌ 10 ರಂದು ಆರ್‌ ಸಿ ಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮಧ್ಯೆ ಪಂದ್ಯ ನಡೆಯುವಾಗಲೇ ಈ ಮೂವರು ಆರೋಪಿಗಳು ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದರು. ಇವರ ಖಚಿತ ಮಾಹಿತಿ ಆಧರಿಸಿ ನಗರದ ವಿವಿಧ ಭಾಗಗಳಲ್ಲಿ ಮೂವರನ್ನೂ ಮೂರು ಕಡೆ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ರೋಹಿತ್‌ ರಂಜನ್‌ ಎಂಬಾತ ಏಪ್ರಿಲ್‌ 10ರಂದು ನಡೆದ ಕ್ರಿಕೆಟ್‌ ಪಂದ್ಯ ನಡೆಯುತ್ತಿರುವಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತುಕೊಂಡೇ ಮೊಬೈಲ್‌ ಮೂಲ...