ಭಾರತ, ಮಾರ್ಚ್ 30 -- ಇಂಡಿಯನ್ ಪ್ರೀಮಿಯರ್ ಲೀಗ್ 2025ರ (IPL 2025) ಆವೃತ್ತಿಯಲ್ಲಿ ಗೆಲುವಿನ ರುಚಿಯನ್ನೇ ನೋಡದ ಮುಂಬೈ ಇಂಡಿಯನ್ಸ್‌ ತಂಡವು, ಮಾರ್ಚ್ 31ರ ಸೋಮವಾರ ನಡೆಯುವ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Mumbai Indians vs Kolkata Knight Riders) ತಂಡವನ್ನು ಎದುರಿಸಲಿದೆ. ಐಪಿಎಲ್‌ 18ನೇ ಸೀಸನ್‌ನ 12ನೇ ಪಂದ್ಯ ಇದಾಗಿದ್ದು, ತವರು ನೆಲ ವಾಂಖೆಡೆ ಕ್ರೀಡಾಂಗಣದಲ್ಲಿ ಗೆಲುವಿನ ಹಳಿಗೆ ಮರಳಲು ಎಂಐ ಶ್ರಮ ಹಾಕಲಿದೆ. ಅತ್ತ ಆರ್‌ಸಿಬಿ ವಿರುದ್ಧ ಸೋತ ನಂತರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಗೆಲುವಿನ ಹಳಿಗೆ ಮರಳಿರುವ ಕೆಕೆಆರ್‌, ಹಾಲಿ ಚಾಂಪಿಯನ್‌ ಪಟ್ಟಕ್ಕನುಸಾರವಾಗಿ ಅಬ್ಬರಿಸುವ ಉತ್ಸಾಹದಲ್ಲಿದೆ.

ಉಭಯ ತಂಡಗಳ ಕೊನೆಯ ಪಂದ್ಯದ ಫಲಿತಾಂಶ ಭಿನ್ನವಾಗಿದೆ. ಆರ್‌ಆರ್ ತಂಡವನ್ನು ಕೆಕೆಆರ್ 8 ವಿಕೆಟ್‌ಗಳಿಂದ ಸೋಲಿಸಿದರೆ, ಜಿಟಿ ವಿರುದ್ಧ ಎಂಐ 36 ರನ್‌ಗಳಿಂದ ಮುಗ್ಗರಿಸಿತ್ತು. ಕೆಕೆಆರ್‌ ತಂಡದ ರಾಜಸ್ಥಾನ ವಿರುದ್ಧದ ಕೊನೆಯ ಪಂದ್ಯ ಮಿಸ್‌ ಮಾಡಿಕೊಂಡಿದ್ದ ಸುನಿಲ್ ನರೈನ್ ತಂಡಕ್ಕೆ ಮರಳುವುದು ಬಹುತೇಕ ಖಚಿತ....