ಭಾರತ, ಮಾರ್ಚ್ 19 -- ಐಪಿಎಲ್ 2025ರ ಋತುವಿನಲ್ಲಿ ಬಹುತೇಕ ಹೆಚ್ಚಿನ ತಂಡಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ನಾಯಕತ್ವದಿಂದ ಹಿಡಿದು, ತಂಡದಲ್ಲೂ ಹೆಚ್ಚಿನ ಬದಲಾವಣೆಗಳನ್ನು ಕಂಡ ತಂಡ ಡೆಲ್ಲಿ ಕ್ಯಾಪಿಟಲ್ಸ್‌. ಆಲ್‌ರೌಂಡರ್ ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೊಚ್ಚಲ ಐಪಿಎಲ್‌ ಟ್ರೋಫಿ ಗೆಲ್ಲಲು ಸಜ್ಜಾಗಿದೆ. ಕಳೆದ ಬಾರಿ ತಂಡವನ್ನು ಮುನ್ನಡೆಸಿದ್ದ ಸ್ಥಳೀಯ ಆಟಗಾರ ರಿಷಭ್ ಪಂತ್, ಈ ಬಾರಿ ಲಕ್ನೋ ತಂಡಕ್ಕೆ ಶಿಫ್ಟ್‌ ಆಗಿದ್ದಾರೆ. ಕನ್ನಡಿಗ ಕೆಎಲ್‌ ರಾಹುಲ್‌ ಡಿಸಿ ತಂಡಕ್ಕೆ ಬಂದರೂ, ನಾಯಕತ್ವದ ಜವಾಬ್ದಾರಿಯನ್ನು ಒಪ್ಪಿಕೊಂಡಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಒಂದಷ್ಟು ಸವಾಲುಗಳೊಂದಿಗೆ ತಂಡವು 18ನೇ ಆವೃತ್ತಿಯಲ್ಲಿ ಆಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಾರ್ಚ್ 24ರ ಸೋಮವಾರ ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ವಿರುದ್ಧ ಐಪಿಎಲ್ 2025ರ ಅಭಿಯಾನ ಆರಂಭಿಸಲಿದೆ. ಡೆಲ್ಲಿ ತಂಡವು ತಮ್ಮ ಮೊದಲ...