ಭಾರತ, ಮಾರ್ಚ್ 22 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಅದ್ಧೂರಿ ಚಾಲನೆ ಸಿಕ್ಕಿತು. ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಸುಮಧುರ ಗೀತೆಗಳ ರಂಜಿಸಿದರೆ, ನಟಿ ದಿಶಾ ಪಟಾನಿ ಕಿಕ್ಕೇರಿಸುವ ಡ್ಯಾನ್ಸ್​ ಮೂಲಕ ಗಮನ ಸೆಳೆದರು. ಮತ್ತೊಂದೆಡೆ ಶಾರೂಖ್ ಖಾನ್ ತಮ್ಮ ಅದ್ಭುತ ನಿರೂಪಣೆಯೊಂದಿಗೆ ಆಕರ್ಷಿಸಿದರು. ವರ್ಣರಂಜಿತ ಅದ್ಧೂರಿ ಕಾರ್ಯಕ್ರಮದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟಾಸ್​ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ ಈ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.

ನೂತನ ಐಪಿಎಲ್ ಸೀಸನ್​ನಲ್ಲಿ ಉಭಯ ತಂಡಗಳಿಗೂ ಹೊಸ ನಾಯಕರು ನೇಮಕಗೊಂಡಿದ್ದಾರೆ. ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸಿದ್ದರು. ಅವರನ್ನು ಮೆಗಾ ಹರಾಜಿಗೂ ಮುನ್ನ ಕೈಬಿಡಲಾಗಿತ್ತು. ಇದೀಗ ಅವರ ಸ್ಥಾನವನ್ನು ರಜತ್ ಪಾಟೀದಾರ್​ ತುಂಬಿದ್ದಾರೆ. ಇನ್ನು ಕೆಕೆಆರ್​ಗೆ ಟ್ರೋಫಿ ಗೆದ್ದುಕೊಟ್ಟಿದ್ದ ಶ್ರೇಯಸ್ ಅಯ್ಯರ್ ಸ್ಥಾನವನ್ನು ಅಜಿಂಕ್ಯ ರಹಾನೆ ತುಂ...