Bangalore, ಫೆಬ್ರವರಿ 11 -- ಬೆಂಗಳೂರು: ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌, ನವೋದ್ಯಮ, ಏರೊಸ್ಪೇಸ್‌ ಆ್ಯಂಡ್‌ ಡಿಫೆನ್ಸ್‌ ಮತ್ತಿತರ ಕ್ಷೇತ್ರಗಳಲ್ಲಿ ವಿಶ್ವದಾದ್ಯಂತ ತನ್ನದೇ ಛಾಪು ಮೂಡಿಸಿರುವ ಕರ್ನಾಟಕವು, ʼಪ್ರಗತಿಯ ಮರುಕಲ್ಪನೆʼ (Reimagining Growth) ಧ್ಯೇಯದ ಇನ್ವೆಸ್ಟ್‌ ಕರ್ನಾಟಕ 2025ರ ಮೂಲಕ ವಿಶ್ವದಾದ್ಯಂತದ ಪ್ರಮುಖ ಹೂಡಿಕೆದಾರರನ್ನು ಸೆಳೆಯಲು ಸಜ್ಜಾಗಿದೆ. ಸತತ ಒಂದು ವರ್ಷದಿಂದ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶ ಜಿಮ್‌ಗೆ ಫೆಬ್ರವರಿ 11ರ ಮಂಗಳವಾರ ಅಧಿಕೃತ ಚಾಲನೆ ದೊರೆಯಲಿದೆ ಫೆಬ್ರವರಿ 14ರ ಶುಕ್ರವಾರದವರೆಗೆ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲಿರುವ ಉದ್ದಿಮೆ ದಿಗ್ಗಜರು, ಹೂಡಿಕೆದಾರರು, ನವೋದ್ಯಮಗಳ ಕನಸುಗಾರರು, ನೀತಿ ನಿರೂಪಣೆಯ ಚಿಂತಕರಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಕೆಂಪುರತ್ನಗಂಬಳಿಯ ಸ್ವಾಗತ ಕೋರಲು ಕರ್ನಾಟಕ ಅಣಿಯಾಗಿದೆ.

ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ...