Bengaluru, ಫೆಬ್ರವರಿ 20 -- ಕರ್ನಾಟಕದಲ್ಲಿ ವಿದ್ಯುತ್‌ ಕಣ್ಣಾ ಮುಚ್ಚಾಲೆ ಆಡುವ ಸಮಯವಿದು. ಈ ಸಮಯದಲ್ಲಿ ಮನೆಯಲ್ಲಿ ಇನ್ವರ್ಟರ್‌ ಇದ್ದರೆ ನಿಶ್ಚಿಂತೆ. ಇನ್ವರ್ಟರ್‌ ಖರೀದಿಸಲು ಬಯಸುವವರಿಗೆ ಇನ್ವರ್ಟರ್‌ ಕುರಿತಾದ ಹಲವು ಸಂದೇಹಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ. ವಿವಿಧ ವ್ಯಾಟ್‌ ಪವರ್‌ನ ಇನ್ವರ್ಟರ್‌ಗಳಲ್ಲಿ ಮನೆಯಲ್ಲಿ ಯಾವೆಲ್ಲ ಸಾಧನಗಳು ಕಾರ್ಯನಿರ್ವಹಿಸುತ್ತವೆ ಎಂಬ ವಿವರವೂ ಇಲ್ಲಿದೆ. ಇನ್‌ವರ್ಟರ್‌ ಮತ್ತು ಯುಪಿಎಸ್‌ ನಡುವಿನ ವ್ಯತ್ಯಾಸವೇನು? ಎಂಬ ಮಾಹಿತಿಯನ್ನೂ ಇಲ್ಲಿ ನೀಡಲಾಗಿದೆ. ಇನ್ವರ್ಟರ್‌ ಬ್ಯಾಟರಿಗಳಿಗೆ ಎಷ್ಟು ಸಮಯಕ್ಕೊಮ್ಮೆ ಡಿಸ್ಟಿಲ್ಡ್‌ ವಾಟರ್‌ ಹಾಕಬೇಕು ಎಂಬ ವಿವರವನ್ನೂ ನೀಡಲಾಗಿದೆ.

ಇನ್ವರ್ಟರ್ ಎನ್ನುವುದು ಎಸ್‌ಎಂಪಿಎಸ್‌ ಆಧರಿತ ಅಥವಾ ಸಾಂಪ್ರದಾಯಿಕ ಪ್ರಕಾರದ ಮೂರು ಪಲ್ಸ್ ಅಥವಾ ಆರು ಪಲ್ಸ್ ಥೈರಿಸ್ಟರ್ ಆಧರಿತ ಸರ್ಕ್ಯೂಟ್ ಅನ್ನು ಬಳಸಿಕೊಂಡು ನೇರ ಪ್ರವಾಹವನ್ನು (DC) ಪರ್ಯಾಯ ಪ್ರವಾಹ (AC) ಶಕ್ತಿಯಾಗಿ ಪರಿವರ್ತಿಸಲು ಬಳಸುವ ಸಾಧನವಾಗಿದೆ.

ಈ ಮುಂದಿನ ಸಾಧನಗಳು ಏಕಕಾಲದಲ್ಲಿ ಕಾರ್ಯನಿರ್ವಹಿ...