ಭಾರತ, ಫೆಬ್ರವರಿ 20 -- ಬೇಸಿಗೆ ಸಖೆಯ ನಡುವೆ ವಿದ್ಯುತ್‌ ಬಳಕೆ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಮನೆಯಲ್ಲಿ ಬಹುತೇಕ ಸಮಯ ಫ್ಯಾನ್‌ಗಳು ಚಾಲು ಇರುತ್ತದೆ. ಕೃಷಿಕರು ಪಂಪ್‌ ಮೂಲಕ ಕೃಷಿಗೆ ನೀರು ಹನಿಸುತ್ತಾ ಇರುತ್ತಾರೆ. ಮನೆಯಲ್ಲಿ ಏರ್‌ ಕಂಡಿಷನ್‌ ಇತ್ಯಾದಿಗಳನ್ನೂ ಬಳಸುವವರು ಇದ್ದಾರೆ. ಇದೆಲ್ಲದರ ಪರಿಣಾಮವಾಗಿ ವಿದ್ಯುತ್‌ ಬೇಡಿಕೆ ಹೆಚ್ಚುತ್ತದೆ. ಇದರಿಂದ ಲೋಡ್‌ ಶೆಡ್ಡಿಂಗ್‌ ತೊಂದರೆಗಳು ಆರಂಭವಾಗುತ್ತದೆ. ಆಗಾಗ ಕರೆಂಟ್‌ ಕಟ್‌ ಆಗುತ್ತ ಇರುತ್ತದೆ. ಮೊದಲೆಲ್ಲ ಬೇಸಿಗೆ ಸಮಯದಲ್ಲಿ ವಿದ್ಯುತ್‌ ಬಳಕೆ ಮಾಡುವ ಮುನ್ನ ತುಸು ಆಲೋಚಿಸುತ್ತಿದ್ದರು. ಆದರೆ, ಈಗ ಹೆಚ್ಚಿನ ಮನೆಗಳು ಗೃಹಜ್ಯೋತಿಯಿಂದ ಉಚಿತ ವಿದ್ಯುತ್‌ ಪಡೆಯುತ್ತವೆ. ಇವೆಲ್ಲವೂ ವಿದ್ಯುತ್‌ ಬೇಡಿಕೆ ಹೆಚ್ಚಿಸಿವೆ.

ಒಂದೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯ. ಇನ್ನೊಂದೆಡೆ ಬೆಂಗಳೂರಿನಂತಹ ನಗರಗಳಲ್ಲಿ ಸಾಕಷ್ಟು ಜನರು ವರ್ಕ್‌ ಫ್ರಮ್‌ ಹೋಮ್‌ ಮಾಡುತ್ತಿದ್ದಾರೆ. ಲೋಡ್‌ ಶೆಡ್ಡಿಂಗ್‌ ಪರಿಣಾಮವಾಗಿ ಕರೆಂಟ್‌ ಕೊಟ್ಟರೆ ಸಾಕಷ್ಟು ತೊಂದರೆಯಾಗುತ್ತದೆ. ಮನೆಯಲ್ಲಿ ಪವ...