ಭಾರತ, ಮಾರ್ಚ್ 14 -- International Day of Mathematics: ಗಣಿತದಲ್ಲಿ ಪೈ(Pi) ಗೆ ವಿಶೇಷ ಮಹತ್ವವಿದೆ. ವೃತ್ತದ ಪರಧಿಯನ್ನು ವ್ಯಾಸದಿಂದ ಭಾಗಿಸಿದರೆ ಸಿಗುತ್ತ ಮೊತ್ತವೇ ಪೈ, ಇದು ಜಗತ್ತಿನ ಅದ್ಭುತ ಅನ್ವೇಷಣೆಗಳಲ್ಲಿ ಒಂದು. ಗಣಿತ, ಸಂಖ್ಯಾಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಪೈ ಒಂದು ಪ್ರಮುಖ ಸಂಕೇತವಾಗಿದೆ. ಇದು ವೃತ್ತದ ಸುತ್ತಳತೆಯ ವ್ಯಾಸದ ಅನುಪಾತವಾಗಿದೆ. ಈ ಅನುಪಾತವು 3.14 PI ನ ಸ್ಥಿರಾಂಕವಾಗಿದೆ.

ಪೈಯ ಮೌಲ್ಯವನ್ನು ಪ್ರತಿನಿಧಿಸುವ ಹಾಗೂ ಪೈಯ ಮೌಲ್ಯವನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಅಂತರರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಪೈ ದಿನ ಎಂದು ಕೂಡ ಕರೆಯುತ್ತಾರೆ. ಅಂತರರಾಷ್ಟ್ರೀಯ ಗಣಿತ ದಿನ ಯಾವಾಗ, ಈ ದಿನ ಇತಿಹಾಸ ಹಾಗೂ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರತಿವರ್ಷ ಮಾರ್ಚ್ 14 ರಂದು ಅಂತರರಾಷ್ಟ್ರೀಯ ಗಣಿತ ದಿನ ಅಥವಾ ಪೈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಶುಕ್ರವಾರ ಅಂದರೆ ಇಂದು ಪೈ ದಿನವಿದೆ.

ಇದನ್ನೂ ಓದಿ: ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನು...