Bangalore, ಏಪ್ರಿಲ್ 28 -- ಅಂತರರಾಷ್ಟ್ರೀಯ ನೃತ್ಯ ದಿನವನ್ನು ವಾರ್ಷಿಕವಾಗಿ ಏಪ್ರಿಲ್ 29 ರಂದು ಆಚರಿಸಲಾಗುತ್ತದೆ. ಈ ವರ್ಷ, 2025 ರಲ್ಲಿ, ಇದನ್ನು ಮಂಗಳವಾರ ಆಚರಿಸಲಾಗುತ್ತದೆ . ಆಧುನಿಕ ಬ್ಯಾಲೆಯ ಪಿತಾಮಹ ಜೀನ್-ಜಾರ್ಜಸ್ ನೊವೆರ್ರೆ ಅವರ ಜನ್ಮದಿನದ ಸ್ಮರಣಾರ್ಥ, ಈ ದಿನವನ್ನು ಮೊದಲು 1982 ರಲ್ಲಿ ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆಯ (ಐಟಿಐ) ನೃತ್ಯ ಸಮಿತಿಯು ಯುನೆಸ್ಕೋ ಪ್ರದರ್ಶನ ಕಲೆಗಳ ಸಹಯೋಗದೊಂದಿಗೆ ಸ್ಥಾಪಿಸಿತು,

ನೃತ್ಯದ ಸೌಂದರ್ಯ ಮತ್ತು ವೈವಿಧ್ಯತೆಯನ್ನು ಆಚರಿಸುವ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಮೀರಿ ಜನರನ್ನು ಒಟ್ಟುಗೂಡಿಸುವ ಅದರ ಸಾಮರ್ಥ್ಯವನ್ನು ಗುರುತಿಸುವ ಉದ್ದೇಶದಿಂದ ಈ ದಿನ ಆಚರಿಸಿಕೊಂಡು ಬರಲಾಗುತ್ತಿದೆ.

ಭಾರತದಲ್ಲಿ ನಾಟ್ಯನರ್ತನಾದಿ ಕಲೆಗಳಿಗೆ ಸುಮಾರು 4000 ವರ್ಷಗಳ ದೀರ್ಘ ಪರಂಪರೆಯಿದೆ. ಋಗ್ವೇದದಲ್ಲಿ ನೃತ್ಯದ ಪ್ರಸಕ್ತಿಯಿದೆ. ಪಗಡೆ ದಾಳಗಳೊಂದಿಗೆ ಅಪ್ಸರೆಯರು ನೃತ್ಯಮಾಡಿದರೆಂಬ ವರ್ಣನೆ ಅಥರ್ವಣ ವೇದದಲ್ಲಿ ಉಂಟು. ಪಾಣಿನಿಯ ಅಷ್ಟಾಧ್ಯಾಯೀ ಮತ್ತು ಪತಂಜಲಿಯ ಮಹಾಭಾಷ್ಯ ಗ್ರಂಥಗಳಲ್ಲಿ ...