ಭಾರತ, ಡಿಸೆಂಬರ್ 9 -- ನವದೆಹಲಿ: ಭ್ರಷ್ಟಾಚಾರ ಎಂಬುದು ಮಾನವ ನಿರ್ಮಿತ ಜಾಗತಿಕ ಸಾಮಾಜಿಕ ಪಿಡುಗು. ಭ್ರಷ್ಟಾಚಾರ ಅಥವಾ ಲಂಚಗುಳಿತನ ದೇಶವೊಂದರ ಅಭಿವೃದ್ಧಿಗೆ ಕಂಟಕವಾಗಿದ್ದು, ಇದರ ನಿರ್ಮೂಲನೆಗೆ ಜಾಗತಿಕವಾಗಿ ಹಲವು ಐತಿಹಾಸಿಕ ಚಳುವಳಿಗಳು ನಡೆದಿರುವುದು ನಮ್ಮ ಕಣ್ಣ ಮುಂದಿರುವ ಇತಿಹಾಸ.

ಇಂದು(ಡಿ.9-ಶುಕ್ರವಾರ) ಜಾಗತಿಕ ಭ್ರಷ್ಟಾಚಾರ ವಿರೋಧಿ ದಿನವಾಗಿದ್ದು, ಭ್ರಷ್ಟಾಚಾರ ಎಂಬ ಜಾಗತಿಕ ಪಿಡುಗನ್ನು ತೊಲಗಿಸುವ ಹೊಸ ಸಂಕಲ್ಪ ಎದ್ದು ಕಾಣುತ್ತಿದೆ. ಭಾರತವೂ ಸೇರಿದಂತೆ ಹಲವೆಡೆ ಭ್ರಷ್ಟಾಚಾರ ವಿರೋಧಿ ಜನಜಾಗೃತಿಗೆ ಮುಂದಡಿ ಇಡಲಾಗಿದ್ದು, ಈ ಪಿಡುಗು ಹೇಗೆ ಸಮಾಜವನ್ನು ದುರ್ಬಲಗೊಳಿಸುತ್ತದೆ ಎಂಬುದರ ಕುರಿತು ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ.

ಭ್ರಷ್ಟಾಚಾರವನ್ನು ಕೊನೆಗೊಳಿಸುವುದು ಎಂದರೆ ಉತ್ತಮ ಜಗತ್ತನ್ನು ನಿರ್ಮಿಸಲು ಕೆಲಸ ಮಾಡುವುದು, ಸಮಾನತೆಯನ್ನು ಉತ್ತೇಜಿಸುವುದು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಪ್ರಗತಿ ಸಾಧಿಸುವುದು ಎಂದರ್ಥ. ಹೀಗಾಗಿ ಈ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ನಾವೆಲ್ಲರೂ ಒಗ್ಗಟ್ಟ...