ಭಾರತ, ಮಾರ್ಚ್ 21 -- Problem With Intercaste Marriage: ಪ್ರೀತಿಗೆ ವಯಸ್ಸು, ಜಾತಿ, ಧರ್ಮದ ಹಂಗಿಲ್ಲ. ಪ್ರೀತಿ ಅನ್ನೋದೊಂದು ಅದ್ಭುತ ಶಕ್ತಿ. ಯಾರಿಗೆ, ಯಾರ ಮೇಲೆ, ಯಾವಾಗ, ಹೇಗೆ ಬೇಕಾದ್ರೂ ಪ್ರೀತಿಯಾಗಬಹುದು. ಪ್ರೀತಿ ಖಂಡಿತ ಕೇಳಿ ಹೇಳಿ, ನೋಡಿ ಮಾಡಿ ಆಗುವುದಿಲ್ಲ. ಮನಸ್ಸು ಯಾರನ್ನ ಮೆಚ್ಚುತ್ತೆ ಅಂತ ನಮಗೆ ತಿಳಿದೂ ಇರುವುದಿಲ್ಲ. ಆದರೆ ಪ್ರೀತಿಯಾದ ಮೇಲೆ ಆ ಪ್ರೀತಿಯನ್ನು ಉಳಿಸಿಕೊಳ್ಳುವುದು ನಿಜಕ್ಕೂ ಸವಾಲು, ಅದರಲ್ಲೂ ಅಂತರ್ಜಾತಿ ಪ್ರೀತಿ ಆದ್ರಂತೂ ಸವಾಲಿನ ಪರಧಿ ವಿಸ್ತಾರವಾಗುತ್ತದೆ. ಅಂತರ್ಜಾತಿ ಪ್ರೀತಿ ಉಳಿಯುವ ವಿಚಾರದಲ್ಲಿ ಹಲವು ಅಂಶಗಳು ಅಡ್ಡಿಯಾಗುತ್ತವೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಹಲವರ ಪ್ರೀತಿಗೆ ಅಡ್ಡಿಯಾಗುತ್ತಿರುವುದು ಜಾತಿ.

ನಮ್ಮ ದೇಶ ವಿಜ್ಞಾನ, ತಂತ್ರಜ್ಞಾನದ ವಿಚಾರದಲ್ಲಿ ಸಾಕಷ್ಟು ಮುಂದುವರಿದಿದೆ. ಬೇರೆ ಯಾವುದೇ ವಿಚಾರದಲ್ಲೂ ಇಷ್ಟೊಂದು ತಲೆಕೆಡಿಸಿಕೊಳ್ಳದ ನಮ್ಮ ಜನ ಅಂತರ್ಜಾತಿಯ ಪ್ರೀತಿ ಅಥವಾ ಮದುವೆ ಎನ್ನುವ ವಿಚಾರಕ್ಕೆ ಬಂದಾಗ ಅಡ್ಡಿಯಾಗಿ ನಿಲ್ಲುತ್ತಾರೆ. ಅಂತರ್ಜಾತಿ ಪ್ರೀತಿ ಮ...