Mysuru, ಫೆಬ್ರವರಿ 15 -- Infosys Layoff: ಮೈಸೂರಿನಲ್ಲಿರುವ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನಲ್ಲಿ ತರಬೇತಿಗೆಂದು ಬಂದಿದ್ದ ಫ್ರೆಷರ್ಸ್‌ ಅಭ್ಯರ್ಥಿಗಳಲ್ಲಿ ಸುಮಾರು 500 ಮಂದಿಯನ್ನು ಏಕಾಏಕಿ ತೆಗೆದು ಹಾಕಿರುವುದು ತೀವ್ರ ವಿವಾದ ಸ್ವರೂಪ ಪಡೆದಿದೆ. ಕೋವಿಡ್‌ ಕಾಲದಲ್ಲಿ ನೇಮಕಗೊಂಡು ಎರಡು ವರ್ಷದ ಬಳಿಕ ಮೈಸೂರಿನಲ್ಲಿರುವ ಇನ್ಫೋಸಿಸ್‌ನ ಜಾಗತಿಕ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಆರಂಭಿಸಿದ್ದ ಹೊಸಬರನ್ನು ಕಳಪೆ ಸಾಧನೆ ಎನ್ನುವ ಕಾರಣ ನೀಡಿ ತೆಗೆದು ಹಾಕಲಾಗಿದೆ. ಸುಮಾರು ಎರಡು ವಾರದಿಂದಲೂ ಈ ಪ್ರಕ್ರಿಯೆ ನಡೆದಿದೆ. ಈವರೆಗೂ ಸುಮಾರು 500 ಮಂದಿಯನ್ನು ಪಟ್ಟಿ ಮಾಡಿ ತೆಗೆದುಹಾಕಲಾಗಿದೆ ಎನ್ನುವ ದೂರು ಕೇಳಿ ಬಂದಿದೆ. ಈ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡವೂ ಭೇಟಿ ನೀಡಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಆದರೆ ಇನ್ಫೋಸಿಸ್‌ ಇದು ಸಂಸ್ಥೆಯಲ್ಲಿ ಸಾಮಾನ್ಯ ಪ್ರಕ್ರಿಯೆ. ಈವರೆಗೂ 300ಕ್ಕೂ ಅಧಿಕ ಮಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಮೈಸೂರಿನಲ್ಲಿ ಎರಡು ದಶಕದ ಹಿಂದೆಯೇ...