Bangalore, ಫೆಬ್ರವರಿ 15 -- Infosys Layoff: ಮೈಸೂರಿನಲ್ಲಿರುವ ಇನ್ಫೋಸಿಸ್‌ ಸಂಸ್ಥೆಯ ಜಾಗತಿಕ ತರಬೇತಿ ಕೇಂದ್ರದಲ್ಲಿನ ಫ್ರೆಷರ್ಸ್‌ ಅನ್ನು ತೆಗೆದು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಪಡೆದಿದೆ. ಮೈಸೂರು ಕ್ಯಾಂಪಸ್‌ಗೆ ಇಲಾಖೆಯ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ತಂಡವು ವಿವರಣೆ ಪಡೆದಿದ್ದು, ವರದಿಯನ್ನು ಒಂದೆರಡು ದಿನಗಳಲ್ಲಿ ಸಲ್ಲಿಸಲಿದೆ. ವರದಿ ಆಧರಿಸಿ ಕರ್ನಾಟಕ ಸರ್ಕಾರಕ್ಕೆ ಪ್ರತ್ಯೇಕ ವರದಿಯನ್ನು ಸಲ್ಲಿಸಲಾಗುವುದು. ಸರ್ಕಾರದಿಂದ ಬರುವ ಸೂಚನೆ ಆಧರಿಸಿ ಇನ್ಫೋಸಿಸ್‌ ಸಂಸ್ಥೆಗೆ ನೋಟಿಸ್‌ ನೀಡುವುದೋ ಅಥವಾ ಬೇರೆ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೋ ಎನ್ನುವ ಕುರಿತು ಪರಿಶೀಲಿಸಲಾಗುವುದು ಎಂದು ಕರ್ನಾಟಕ ಕಾರ್ಮಿಕ ಇಲಾಖೆಯ ಆಯುಕ್ತ ಎಚ್‌.ಎನ್‌.ಗೋಪಾಲಕೃಷ್ಣ ಹೇಳುತ್ತಾರೆ.

ವಿವಾದದ ಹಿನ್ನೆಲೆಯಲ್ಲಿ ಹಿಂದೂಸ್ತಾನ್‌ ಟೈಂಸ್‌ ಕನ್ನಡದೊಂದಿಗೆ ಮಾತನಾಡಿದ ಅವರು, ಇನ್ಫೋಸಿಸ್‌ನಲ್ಲಿ ತರಬೇತಿ ಹಂತದಲ್ಲಿದ್ದ ನೌಕರರು ಈಗಾಗಲೇ ಇಲ...