Bengaluru, ಫೆಬ್ರವರಿ 21 -- Infosys Careers: ಜಗತ್ತಿನ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಇನ್ಪೋಸಿಸ್‌ನಲ್ಲಿ ಉದ್ಯೋಗ ಪಡೆಯುವುದು ಬಹುತೇಕರ ಕನಸು. ಕೈತುಂಬಾ ವೇತನ, ಉತ್ತಮ ಸೌಕರ್ಯಗಳು ಮತ್ತು ಪ್ರತಿಷ್ಠೆಯ ಕಾರಣಕ್ಕಾಗಿ ಹೆಚ್ಚಿನವರು ಇನ್ಪೋಸಿಸ್‌ನಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಕಂಪನಿಯು ಆಗಾಗ ಕ್ಯಾಂಪಸ್‌ ಇಂಟರ್‌ವ್ಯೂ ಮೂಲಕವೂ ನೇಮಕಾತಿ ನಡೆಸುತ್ತದೆ. ಇತ್ತೀಚೆಗೆ ಮೈಸೂರು ಇನ್ಪೋಸಿಸ್‌ ಕ್ಯಾಂಪಸ್‌ನಲ್ಲಿ ಫ್ರೆಶರ್‌ಗಳ ಉದ್ಯೋಗ ಕಡಿತವೂ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಕಂಪನಿಯ ನೇಮಕಾತಿ ಪ್ರಕ್ರಿಯೆ ಕಠಿಣವಿರುತ್ತದೆ. ಆಂತರಿಕ ನೇಮಕಾತಿ ಪರೀಕ್ಷೆಗಳೂ ಇರುತ್ತವೆ. ಇದೆಲ್ಲದರ ನಡುವೆ ಅನುಭವಿಗಳಿಗೆ, ನಿರ್ದಿಷ್ಟ ಐಟಿ ಸ್ಕಿಲ್ಸ್‌ ಇರುವವರಿಗೆ ಇನ್ಪೋಸಿಸ್‌ನಲ್ಲಿ ಅವಕಾಶಗಳು ಇರುತ್ತವೆ. ಬೆಂಗಳೂರು, ಪುಣೆ ಸೇರಿದಂತೆ ವಿವಿಧ ಇನ್ಪೋಸಿಸ್‌ ಕಚೇರಿಗಳಲ್ಲಿ ನೇಮಕಾತಿ ನಡೆಯುತ್ತ ಇರುತ್ತದೆ. ಸದ್ಯ ಬೆಂಗಳೂರು ಇನ್ಪೋಸಿಸ್‌ನಲ್ಲಿ ಯಾವೆಲ್ಲ ಹುದ್ದೆಗಳು ಖಾಲಿ ಇವೆ ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ. ಹೆಚ್ಚಿನ ವಿವರ...