Bengaluru, ಫೆಬ್ರವರಿ 21 -- ಒಳಾಂಗಣ ಸಸ್ಯಗಳು ಮನೆ, ಕಚೇರಿ ಮತ್ತು ಇತರ ಒಳಾಂಗಣ ಸ್ಥಳಗಳಲ್ಲಿ ಬೆಳೆಯುವ ಸಸ್ಯಗಳಾಗಿವೆ. ಅವು ಮನೆಯ ಅಥವಾ ಕಚೇರಿಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಪ್ರಯೋಜನಗಳನ್ನು ನೀಡುತ್ತವೆ. ಸಾಮಾನ್ಯವಾಗಿ ಈ ಸಸ್ಯಗಳನ್ನು ಕಡಿಮೆ ಬೆಳಕಿಗೆ ಹೊಂದಿಕೊಳ್ಳುವ ಸಾಮರ್ಥ್ಯ, ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಮತ್ತು ಸುಲಭ ನಿರ್ವಹಣೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಒಳಾಂಗಣ ಸಸ್ಯಗಳು ಬೇಸಿಗೆಯಲ್ಲಿ ಹಲವಾರು ಪ್ರಯೋಜನಗಳನ್ನು ನೀಡುತ್ತವೆ, ಮನೆಯನ್ನು ತಂಪಾಗಿ ಇರಿಸುವುದರ ಜೊತೆಗೆ ಗಾಳಿಯ ಗುಣಮಟ್ಟವನ್ನೂ ಸುಧಾರಿಸುತ್ತದೆ. ಒಳಾಂಗಣ ಸಸ್ಯಗಳ ಕೆಲವೊಂದು ಪ್ರಮುಖ ಪ್ರಯೋಜನಗಳು ಯಾವುವು ನೋಡೋಣ..

ಸಸ್ಯಗಳು ಬಾಷ್ಪವಿಸರ್ಜನೆಯ ಮೂಲಕ ತೇವಾಂಶವನ್ನು ಬಿಡುಗಡೆ ಮಾಡುತ್ತವೆ. ಇದು ಗಾಳಿಯ ತೇವಾಂಶವನ್ನು ಹೆಚ್ಚಿಸುವುದರ ಜೊತೆಗೆ ನೈಸರ್ಗಿಕವಾಗಿ ಗಾಳಿಯನ್ನು ತಂಪಾಗಿಸಲು ಸಹಾಯ ಮಾಡುತ್ತವೆ. ಅರೇಕಾ ಪಾಮ್ ಮತ್ತು ಪೀಸ್ ಲಿಲ್ಲಿಯಂತಹ ದೊಡ್ಡ ಎಲೆಗಳ ಸಸ್ಯಗಳು ಒಳಾಂಗಣವನ್ನು ತಂಪಾಗಿಸು...