Delhi, ಫೆಬ್ರವರಿ 1 -- Indian Railways: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ 2025-26ನೇ ಸಾಲಿನ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಭಾರೀ ಪ್ರಮಾಣದಲ್ಲಿ ಅನುದಾನ ಏರಿಕೆಯೇನೂ ಆಗಿಲ್ಲ. ಅದರೆ ಕಳೆದ ಆರ್ಥಿಕ ವರ್ಷದಲ್ಲಿ ರೈಲ್ವೆ ವಲಯಕ್ಕೆ ಮೀಸಲಿಟ್ಟಿದ್ದ 2.65 ಲಕ್ಷ ಕೋಟಿ ರೂ. ಮೊತ್ತವನ್ನೇ ನಿಗದಿಪಡಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆ ಪ್ರಮಾಣ ಅತ್ಯಲ್ಪ. ಹಿಂದಿನ ವರ್ಷದಲ್ಲಿ ಘೋಷಿಸಲಾಗಿದ್ದ ಕೆಲವು ರೈಲ್ವೆ ಯೋಜನೆಗಳಿಗೆ ಈ ಬಾರಿಯೂ ಅನುದಾನವನ್ನು ಮೀಸಲಿಡಲಾಗಿದೆ. ವಂದೇ ಭಾರತ್‌ ಸಹಿತ ಹಲವು ರೈಲುಗಳ ಸೇವೆ ವಿಸ್ತರಣೆ, ಪ್ರಮುಖ ರೈಲು ಮಾರ್ಗಗಳ ಜಾರಿಗೆ ಹಿಂದಿನಂತೆಯೇ ಒತ್ತು ನೀಡಲಾಗಿದೆ. ರೈಲ್ವೆ ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ಈ ಬಜೆಟ್‌ನಲ್ಲೂ ನೀಡಲಾಗಿದೆ.

ರೈಲ್ವೆ ಇಲಾಖೆಗೆ ಕಳೆದ ಸಾಲಿನಲ್ಲಿ ರೂ2.62 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಜೆಟ್‌ನಲ್ಲಿ ರೂ. 2.65 ಲಕ್ಷ ಕೋಟಿ ನೀಡಲಾಗಿದೆ. ಈ ಪೈಕಿ ಪ್ರಯಾಣಿಕರ ಸವಲತ್ತುಗಳಿಗಾಗಿ ರೂ. 12 ಸಾವಿರ ಕೋಟಿ, ಸುರಕ್ಷ...