ಭಾರತ, ಜನವರಿ 28 -- ಪ್ರತಿದಿನ ಲಕ್ಷಾಂತರ ಜನರು ಭಾರತೀಯ ರೈಲ್ವೆಯ ವಿವಿಧ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ನೀವು ಕೂಡ ರೈಲಿನಲ್ಲಿ ಸಾಕಷ್ಟು ಬಾರಿ ಸಂಚರಿಸಿರಬಹುದು. ನೀವು ಎಂದಾದರೂ ರೈಲಿನ ಗಾಲಿ ಅಥವಾ ರೈಲಿನ ಚಕ್ರಗಳನ್ನು ಗಮನಿಸಿದ್ದೀರಾ? ರೈಲಿನ ಚಕ್ರದ ಆಕಾರ ಏಕೆ ಶಂಖಾಕೃತಿಯಲ್ಲಿದೆ? ಈ ಚಕ್ರ ಎಷ್ಟು ತೂಕ ಇರಬಹುದು ಎಂದು ಯೋಚಿಸಿದ್ದೀರ? ರೈಲಿನ ಗಾಲಿಗೆ ಸಂಬಂಧಪಟ್ಟ ಒಂದಿಷ್ಟು ವಿಚಾರಗಳು ಇಲ್ಲಿವೆ.

ಒಂದು ಕೋಚ್‌ನಲ್ಲಿ ಎರಡು ಬೋಗಿಗಳು ಇರುತ್ತವೆ. ಎರಡು ಬೋಗಿಗಳಲ್ಲಿ (ಒಂದು ಕೋಚ್‌ನಲ್ಲಿ) ಎಂಟು ಚಕ್ರಗಳು ಇರುತ್ತವೆ. ಸಾಮಾನ್ಯವಾಗಿ ಪ್ಯಾಸೇಂಜರ್‌ ಟ್ರೇನ್‌ಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಕೋಚುಗಳು (ಒಂದು ಕೋಚ್‌ನಲ್ಲಿ ಎರಡು ಬೋಗಿ ಇರಬಹುದು, ಕೋಚ್‌ ಬೇರೆ, ಬೋಗಿ ಬೇರೆ ನೆನಪಿಟ್ಟುಕೊಳ್ಳಿ) ಇರುತ್ತವೆ. ಪ್ಯಾಸೇಂಜರ್‌ ಕಾರ್ಸ್‌ನಲ್ಲಿ (ಕೋಚ್‌) ನಾಲ್ಕು ಆ್ಯಕ್ಸೆಲ್‌ಗಳು ಅಂದರೆ ಎಂಟು ಚಕ್ರಗಳು ಇರುತ್ತವೆ. ಪ್ರತಿಯೊಂದು ಬೋಗಿಗಳು ಎರಡು ಆ್ಯಕ್ಸೆಲ್‌ಗಳು ಅಂದರೆ ನಾಲ್ಕು ಚಕ್ರಗಳನ್ನು ಹೊಂದಿರುತ್ತವೆ. ನಾಲ...