Mysuru, ಮಾರ್ಚ್ 22 -- Indian Railways: ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮೈಸೂರಿನಿಂದ ಬೆಂಗಳೂರು ತುಮಕೂರು ಹಾಸನ ಮಂಗಳೂರು ಉಡುಪಿ ಮಾರ್ಗವಾಗಿ ಕಾರವಾರ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಕಾರ್ಯಾಚರಣೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಇದಲ್ಲದೇ ಮೈಸೂರಿನಿಂದ ಬೆಂಗಳೂರು ಬಳ್ಳಾರಿ ಗದಗ ಬಾಗಲಕೋಟೆ ಮಾರ್ಗವಾಗಿ ವಿಜಯಪುರಕ್ಕೂ ಒಂದು ಟ್ರಿಪ್‌ ರೈಲು ಓಡಲಿದೆ. ಕಾಯ್ದಿರಿಸುವಿಕೆ, ಆಗಮನ ಮತ್ತು ನಿರ್ಗಮನ ಸಮಯ ಮತ್ತು ಹೆಚ್ಚಿನ ವಿವರಗಳಿಗಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ರೈಲು ಸಂಖ್ಯೆ 06203 ಮೈಸೂರು-ಕಾರವಾರ ವಿಶೇಷ ಎಕ್ಸ್ ಪ್ರೆಸ್ ರೈಲು ಮಾ.28ರಂದು ರಾತ್ರಿ 9.35ಕ್ಕೆ ಮೈಸೂರಿನಿಂದ ಹ...