Bangalore, ಏಪ್ರಿಲ್ 29 -- ಬೆಂಗಳೂರು: ಭಾರತೀಯ ರೈಲ್ವೆ ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದಹಬ್ಬನಘಟ್ಟ ಮತ್ತು ಅರಸೀಕೆರೆ ನಡುವಿನ ಲೈನ್ ಬ್ಲಾಕ್‌ನಿಂದಾಗಿ ಈ ಹಿಂದೆ ರದ್ದುಗೊಳಿಸಲಾಗಿದ್ದ, ಭಾಗಶಃ ರದ್ದುಗೊಳಿಸಲಾಗಿದ್ದ ಮತ್ತು ನಿಯಂತ್ರಿಸಲಾಗಿದ್ದ ಕೆಲವು ರೈಲು ಸೇವೆಗಳನ್ನು ಪುನರಾರಂಭಿಸಲಾಗಿದೆ. ಇದರಲ್ಲಿ ಅರಸೀಕೆರೆ - ಮೈಸೂರು ಪ್ಯಾಸೆಂಜರ್ ರೈಲು, ಮೈಸೂರು - ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು, ಮೈಸೂರು - ತಾಳಗುಪ್ಪ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಈಗ ಮೂರೂ ರೈಲುಗಳ ಭಾಗಶಃ ಸಂಚಾರ ರೈಲು ಸೇವೆ ರದ್ದು ಆದೇಶ ಹಿಂಪಡೆಯಲಾಗಿದ್ದು. ಮೊದಲಿದ್ದ ರೀತಿಯಲ್ಲೇ, ಅದೇ ಸಮಯದಲ್ಲಿ ಈ ರೈಲುಗಳು ಸಂಚರಿಸಲಿವೆ ಎಂದು ಮೈಸೂರು ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

1. ರೈಲು ಸಂಖ್ಯೆ 56267 ಅರಸೀಕೆರೆ - ಮೈಸೂರು ಪ್ಯಾಸೆಂಜರ್ ರೈಲು, ಈ ಹಿಂದೆ ಏಪ್ರಿಲ್ 29, ಮೇ 3 ಮತ್ತು 10 ರಂದು ರದ್...