Mysuru, ಏಪ್ರಿಲ್ 7 -- Indian Railways:ಮೈಸೂರು, ದಕ್ಷಿಣ ಕನ್ನಡ, ಹಾವೇರಿ, ಹಾಸನ, ದಾವಣಗೆರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಯ ವ್ಯಾಪ್ತಿ ಹೊಂದಿರುವ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಮುದಿತ್ ಮಿತ್ತಲ್ ಅವರು ಅಧಿಕಾರ ಸ್ವೀಕರಿಸಿದರುಭಾರತೀಯ ರೈಲ್ವೆ ಲೆಕ್ಕ ಸೇವೆಯ ಹಿರಿಯ ಅಧಿಕಾರಿಯಾದ ಮುದಿತ್ ಮಿತ್ತಲ್ ಅವರು 2025ರ ಸೋಮವಾರ ಏಪ್ರಿಲ್ 07, ರಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿದರು. ಮೂರು ವರ್ಷದಿಂದ ಇಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ವರ್ಗಗೊಂಡಿರುವ ಶ್ರೀಮತಿ ಶಿಲ್ಪಿ ಅಗರ್‌ವಾಲ್ ಅವರಿಂದ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಮಿತ್ತಲ್ ಅವರು 1996 ರ ಪರೀಕ್ಷಾ ತಂಡದ ಐ.ಆರ್‌.ಎ.ಎಸ್ ಸೇವೆಯ ಅಧಿಕಾರಿಯಾಗಿದ್ದಾರೆ. ಅವರು ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ), ರೂರ್ಕಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ಪದವೀಧರರಾಗಿದ್ದು, ಸಿಂಗಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ ಲೀ ಕ್ವಾನ್ ಯ...