Mysuru, ಫೆಬ್ರವರಿ 16 -- Indian Railways: ಮೈಸೂರು ಹಾಗೂ ಬೆಂಗಳೂರು ರೈಲ್ವೆ ನಿಲ್ದಾಣಗಳ ನಡುವೆ ಸಂಚರಿಸುತ್ತಿರುವ ಪ್ರಮುಖ ರೈಲುಗಳಲ್ಲಿ ಒಟ್ಟು ಎಂಟು ರೈಲುಗಳು ಇನ್ನು ಮುಂದೆ ಮೈಸೂರಿನ ಹೊರ ವಲಯದಲ್ಲಿ ಉನ್ನತೀಕರಿಸಲಾಗಿರುವ ಅಶೋಕಪುರಂ ರೈಲ್ವೆ ನಿಲ್ದಾಣಗಳಿಗೂ ವಿಸ್ತರಣೆಯಾಗಲಿವೆ. ಮೈಸೂರಿನಿಂದ ನಂಜನಗೂಡು, ಚಾಮರಾಜನಗರಕ್ಕೆ ಹೋಗುವ ಮಾರ್ಗದಲ್ಲಿರುವ ಅಶೋಕಪುರಂ ರೈಲ್ವೆ ನಿಲ್ದಾಣ ಹಳೆಯದಾದರೂ ಅದನ್ನು ಈಗ ಅಭಿವೃದ್ದಿಪಡಿಸಲಾಗಿದೆ. ಅಲ್ಲಿ ಇನ್ನೊಂದು ದ್ವಾರವನ್ನು ತೆರೆಯಲಾಗಿದ್ದು ಟಿಕೆಟ್‌ ಕೌಂಟರ್‌ ಕೂಡ ಆರಂಭಿಸಲಾಗಿದೆ. ಮೈಸೂರು ದಕ್ಷಿಣ ಭಾಗದ ಜನತೆ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಹೋಗುವ ಬದಲು ಅಶೋಕಪುರಂನಿಂದಲೇ ಬೆಂಗಳೂರು ನಡುವೆ ಸಂಚರಿಸುವ ಎಂಟು ರೈಲುಗಳನ್ನು ಇನ್ನು ಮುಂದೆ ಪ್ರಯಾಣಿಕರ ಬಳಸಿಕೊಳ್ಳಬಹುದು. ಇದರಿಂದ ಮುಖ್ಯ ನಿಲ್ದಾಣದಲ್ಲಿ ಅನಗತ್ಯ ಪ್ರಯಾಣಿಕರ ಒತ್ತಡ ತಗ್ಗಲಿದೆ.

Published by HT Digital Content Services with permission from HT Kannada....